ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ತಮ್ಮ ಟ್ವಟ್ಟರ್ ಖಾತೆ ಡಿಲೀಟ್ ಮಾಡಿರೋದು ಸಾಕಷ್ಟು ಚರ್ಚೆಗಳಿಗೆ ಆಸ್ಪದ ನೀಡ್ತಿದೆ. ರಮ್ಯಾಗೆ ಎಐಸಿಸಿ ಏನಾದ್ರೂ ಗೇಟ್ ಪಾಸ್ ಕೊಡ್ತಾ ಅನ್ನೋ ಪ್ರಶ್ನೆಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್ ನಾಥ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಪುಷ್ಪಾ ಅಮರನಾಥ್, ಎಐಸಿಸಿ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಯಿಂದ ರಮ್ಯಾಗೆ ಗೇಟ್ ಪಾಸ್ ನೀಡಲಾಗಿಲ್ಲ. ಅವರು ಸೋಶಿಯಲ್ ಮೀಡಿಯಾ ಮುಖ್ಯಸ್ಥರಾಗಿಯೇ ಇದ್ದಾರೆ. ಆದ್ರೆ ಅವರು ಒಂದು ತಿಂಗಳ ಕಾಲ ಯಾವುದೇ ಹೇಳಿಕೆ ನೀಡದಂತೆ ಸುರ್ಜೇವಾಲ ಫರ್ಮಾನು ನೀಡಿದ್ದಾರೆ. ಹೀಗಾಗಿ ರಮ್ಯಾ ರೆಸ್ಟ್ ಮಾಡುತ್ತಿರಬಹುದು ಅಂತ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಅಲ್ಲದೆ ರಮ್ಯಾ ಯಾವುದೇ ಹಣ ದುರ್ಬಳಕೆ ಮಾಡಿಕೊಂಡಿಲ್ಲ ಅದೆಲ್ಲಾ ಊಹಾಪೋಹದ ಸುದ್ದಿ, ರಾಹುಲ್ ಗಾಂಧಿ ಜನ್ಮದಿನಕ್ಕೂ ರಮ್ಯಾ ಶುಭಾಶಯ ಕೋರಿದ್ದಾರಲ್ಲಾ ಅಂತ ಇದೇ ವೇಳೆ ಪುಷ್ಪಾ ಅಮರನಾಥ್ ಸಮರ್ಥಿಸಿಕೊಂಡ್ರು.
ರಮ್ಯಾ ಮೇಲೆ ಕೇಳಿಬರುತ್ತಿರೋ ಆರೋಪವೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ