ನವದೆಹಲಿ: ಊಟದ ಬಾಕ್ಸ್ ತೊಳೆಯೋ ವಿಚಾರವಾಗಿ ಪೈಲಟ್- ಸಿಬ್ಬಂದಿ ಜಗಳದಿಂದಾಗಿ ಪ್ರಯಾಣಿಕರು ಕಂಗಾಲಾದ ಘಟನೆ ನಡೆದಿದೆ.
ನಿನ್ನೆ ನಡೆದ ಈ ಘಟನೆಯಲ್ಲಿ ಪೈಲಟ್ ಮತ್ತು ಸಿಬ್ಬಂದಿ ಪರಸ್ಪರ ಮಾತಿನ ಚಕಮಕಿ ಅತಿರೇಖಕ್ಕೆ ತಿರುಗಿತ್ತು. ಊಟದ ಬಳಿಕ ಪೈಲಟ್ , ಸಿಬ್ಬಂದಿಗೆ ಟಿಫನ್ ಬಾಕ್ಸ್ ತೊಳೆದಿಡೋದಕ್ಕೆ ಹೇಳಿದ್ದರು. ಬೆಂಗಳೂರು- ಕೋಲ್ಕತ್ತಾ ಏರ್ ಇಂಡಿಯಾ ವಿಮಾನದಲ್ಲಿ ಅದಾಗಲೇ ಪ್ರಯಾಣಿಕರೆಲ್ಲರೂ ತಮ್ಮ ಸೀಟುಗಳಲ್ಲಿ ಕುಳಿತುಕೊಂಡಿದ್ರು. ಹೀಗಾಗಿ ತನಗೆ ಇತರೆ ಕೆಲಸಗಳಿವೆ ಅಂತ ಹೇಳಿ ಸಿಬ್ಬಂದಿ ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ಪೈಲಟ್ ಪ್ರಯಾಣಿಕರೆದುರೇ ಏಕಾಏಕಿ ಕಿರುಚಾಡಲು ಶುರುವಿಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಬ್ಬಂದಿ ಕೂಡ ಪ್ರತ್ಯುತ್ತರ ನೀಡಿದ್ದಾರೆ. ಪರಿಸ್ಥಿತಿ ಅತಿರೇಖಕ್ಕೆ ಹೋದಾಗ ಸ್ಥಳಕ್ಕೆ ಬಂದ ಅಧಿಕಾರಿಗಳು ಇಬ್ಬರನ್ನೂ ವಿಮಾನದಿಂದ ಕೆಳಕ್ಕಿಳಿಸಿ, ಬದಲಿ ಪೈಲಟ್ ನಿಯೋಜನೆ ಮಾಡಿದ್ರು.
ಆದ್ರೆ ಅಧಿಕಾರಿಗಳು ಬದಲಿ ವ್ಯವಸ್ಥೆ ಕಲ್ಪಿಸಿದ್ದರಿಂದ ವಿಮಾನ ಸುಮಾರು 2 ಗಂಟೆಗಳ ಕಾಲ ತಡವಾಗಿ ಟೇಕ್ ಆಫ್ ಆಗಿದೆ. ಇದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆಗೀಡಾದ್ರು. ಇನ್ನು ಘಟನೆ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೋದಿಗೆ ರೈತನ ದಯನೀಯ ಪತ್ರ..! ಮಿಸ್ ಮಾಡದೇ ಈ ವಿಡಿಯೋ ನೋಡಿ