- Advertisement -
ಬರ್ಮಿಂಗ್ ಹ್ಯಾಮ್: ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಪಿ.ವಿ.ಸಿಂಧು ಪಾಕಿಸ್ಥಾನದ ಅಗ್ರ ಆಟಗಾರ್ತಿ ಮಾಹೂರ್ ಶಹಜಾದ್ ವಿರುದ್ಧ 21-7 ಅಂಕಗಳಿಂದ ಗೆದ್ದರು.
ಹಾಕಿ : ಗೆದ್ದ ವನಿತೆಯರು
ಇನ್ನು ಮಹಿಳಾ ಹಾಕಿ ತಂಡ ಘಾನ ವಿರುದ್ಧ 5-0 ಗೋಲುಗಳಿಂದ ಗೆದ್ದು ಶುಭಾರಂಭ ಮಾಡಿದೆ. ಎ ಗುಂಪಿನ ವಿಭಾಗದ ಪಂದ್ಯದಲ್ಲಿ ಗುರ್ಜಿತ್ ಕೌರ್ (39ನೇ ನಿಮಿಷ), ನೇಹಾ (28 ನಿಮಿಷ), ಸಂಗೀತಾ ಕುಮಾರಿ (36ನೇ ನಿಮಿಷ), ಸಲೀಮಾ ಟೆಟೆ (56ನೇ ನಿಮಿಷ) ಗೋಲುಗಳನ್ನು ಹೊಡೆದರು. ಇಂದು ವೇಲ್ಸ್ ವಿರುದ್ಧ ಎರಡನೆ ಪಂದ್ಯ ಆಡಲಿದೆ.
- Advertisement -

