‘ಜಡೆ ಕಟ್ಟಿದ್ದಕ್ಕೆ ಅಮ್ಮನ ಜೊತೆ ಜಗಳವಾಡಿದ್ದೆ… ಆದ್ರೆ ಆಮೇಲೆ ಆಗಿದ್ದೇ ಬೇರೆ’

ಲವ್‌ ಮಾಕ್ಟೇಲ್ ಸಿನಿಮಾ ಮೂಲಕ ಫೇಮಸ್ ಆಗಿದ್ದ ನಟಿ ರಚನಾ ಇಂದರ್ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಲವ್ ಮಾಕ್ಟೇಲ್ ಸಿನಿಮಾ ಮಾಡುವಾಗ ತಮ್ಮ ಅನುಭವ ಹೇಗಿತ್ತು ಅಂತಾ ಹೇಳಿಕೊಂಡಿದ್ದಾರೆ.

ಲವ್ ಮಾಕ್ಟೇಲ್ ಸಿನಿಮಾ ರಿಲೀಸ್ ಆಗಿ ಥಿಯೇಟರ್‌ಗೆ ಬಂದ್ರು ಕೂಡಾ ಅಷ್ಟು ಹೆಸರು ಮಾಡಿರಲಿಲ್ಲ. ಆದ್ರೆ ಕೊರೊನಾ ಸಮಯದಲ್ಲಿ ಓಟಿಟಿ ಫ್ಲಾಟ್‌ಫಾರ್ಮ್ಗೆ ಬಂದ ಮೇಲೆ ಆ ಸಿನಿಮಾವನ್ನ ಜನ ಹೆಚ್ಚು ಮೆಚ್ಚಿಕೊಂಡರು. ಛೇ ಇಂಥ ಸಿನಿಮಾವನ್ನ ನಾವು ಥಿಯೇಟರ್‌ನಲ್ಲಿ ನೋಡಬೇಕಿತ್ತು. ಮಿಸ್ ಮಾಡಿಕೊಂಡ್ವಿ ಅಂತಾ ಬೇಸರಪಟ್ಟರು. ಆದ್ರೆ ಓಟಿಟಿಯಲ್ಲಿ ಲವ್ ಮಾಕ್ಟೇಲ್ ಸಿನಿಮಾ ನೋಡಿದವರ ಸಂಖ್ಯೆ ಲಕ್ಷ ದಾಟಿತ್ತು.

ಆ ಸಿನಿಮಾದಲ್ಲಿ ನಿಧಿಮಾ ಮತ್ತು ಕೃಷ್ಣ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ರಚನಾ ಕೂಡ ಸಖತ್ ಫೇಮಸ್ ಆಗಿದ್ರು. ಈ ಬಗ್ಗೆ ರಚನಾ ಮಾತನಾಡಿದ್ದಾರೆ. ರಿಲೀಸ್ ಆಗಿ ಥಿಯೇಟರ್‌ಗೆ ಬಂದಾಗ, ನನಗೆ ನಾನು ಮಾಡಿದ ಆ್ಯಕ್ಟ ಬರೀ ಆ್ಯಕ್ಟ್ ಮತ್ತು ನಾನು ಹೇಳಿದ ಡೈಲಾಗ್ ಬರೀ ಡೈಲಾಗ್ ಅಂತಷ್ಟೇ ಅನ್ನಿಸಿತ್ತು. ಆದ್ರೆ ಅದು ಓಟಿಟಿಗೆ ಬಂದಾಗ  ಆ ಕ್ಯಾರೆಕ್ಟರ್ಗೆ ಎಷ್ಟು ಬೆಲೆ ಇದೆ ಅಂತಾ ಗೊತ್ತಾಯ್ತು ಅಂತಾ ರಚನಾ ಹೇಳಿದ್ರು.

ಇನ್ನು ರಚನಾ ಅವರ ಹೊಸ ಮೂವಿ ಲವ್ 360 ಟ್ರೇಲರ್ ರಿಲೀಸ್ ಆಗಿದ್ದು, ಅದಕ್ಕೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಆ ಬಗ್ಗೆ ಮಾತನಾಡಿದ ರಚನಾ, ನಾನು ಆಡಿಶನ್‌ಗೆ ಹೋಗುವ ದಿನ ಅಮ್ಮನ ಜೊತೆ ಜಗಳ ಆಡಿದ್ದೆ. ಯಾಕಂದ್ರೆ ಅಮ್ಮ ಒತ್ತಾಯ ಮಾಡಿ ಜಡೆ ಮತ್ತು ಝುಮ್ಕಿ ಹಾಕಿ ಕಳಿಸಿದ್ರು. ನಾನು ಚೂಡಿದಾರ್ ಹಾಕಿದ್ದೆ. ಜಡೆ ಹಾಕಿದ್ದಕ್ಕೆ ಕೋಪ ಬಂದು ಅಮ್ಮನ ಹತ್ರಾ ಜಗಳ ಮಾಡಿದ್ದೆ. ಆದ್ರೆ ಸರ್ ನನ್ನ ಲುಕ್ ನೋಡಿ 50%  ಅಲ್ಲೇ ಸೆಲೆಕ್ಟ್ ಮಾಡಿಬಿಟ್ರು. ಯಾಕಂದ್ರೆ ಆ ರೋಲ್‌ಗೆ ನನ್ನ ಲುಕ್ ಸೂಟ್ ಆಗ್ತಿತ್ತು ಅಂತಾ ರಚನಾ ಹೇಳಿದ್ದಾರೆ.

About The Author