ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ

Political News: ಉತ್ತರಭಾರತದ ರಾಜ್ಯವೊಂದರಲ್ಲಿ ಮತದಾರರನ್ನು ಪತ್ರಕರ್ತರು ಮಾತನಾಡಿಸಿದಾಗ, ಅಲ್ಲಿ ಕೆಲ ಮುಸ್ಲಿಂಮರು ಕಾಂಗ್ರೆಸ್ ಸರ್ಕಾರಕ್ಕೆ ಬಂಬಲ ನೀಡಿದರು. ಆದರೆ ಅದೇ ವೇಳೆ ಅಲ್ಲೇ ಇದ್ದ ಎಲ್‌ಎಲ್‌ಬಿ ಮಾಡಿದ ಓರ್ವ ಮುಸ್ಲಿಂ ಯುವಕ, ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾನೆ.

70 ವರ್ಷದಿಂದ ಆಡಳಿತ ಮಾಡಿರುವ ಕಾಂಗ್ರೆಸ್ ಮುಸ್ಲಿಂಮರಿಗೆ ಏನು ನೀಡಿದೆ..? ಕಟಿಂಗ್ ಮಾಡಲು, ಕೈಯಲ್ಲೊಂದು ಬ್ಲೇಡ್, ಅಥವಾ ರಿಕ್ಷಾ ಅಥವಾ ಪಂಕ್ಚರ್ ಹಾಕುವ ವಸ್ತುವನ್ನಷ್ಚೇ ಕಾಂಗ್ರೆಸ್, ಮುಸ್ಲಿಂಮರಿಗೆ ನೀಡಿದೆ. ಆದರೆ ಇಂದಿನ ಯುವ ಪೀಳಿಗೆಗೆ ಅದೆಲ್ಲ ಬೇಕಾಗಿಲ್ಲ. ನಾನು ಎಲ್‌ಎಲ್‌ಬಿ ಓದಿದ್ದೇನೆ. ಯಾವಾಗ ಮೋದಿಜಿಯವರು ದೇಶದ ಪ್ರಧಾನಿಯಾಗಿದ್ದಾರೋ, ಅಂದಿನಿಂದ ಒಂದು ಕೈಗೆ ಕುರಾನ್ ಕೊಟ್ಟಿದ್ದಾರೆ. ಇನ್ನೊಂದು ಕೈಯಲ್ಲಿ ಲ್ಯಾಪ್‌ಟಾಪ್ ಹಿಡಿದಿದ್ದೇವೆ ಎಂದಿದ್ದಾರೆ.

ಅಲ್ಲದೇ, ನಾವು ಲಕ್ಷಾಂತರ ಜನ ಭಾರತ ದೇಶದಲ್ಲಿ ಇದ್ದೇವೆ. ಇಲ್ಲಿರುವ ಮುಸ್ಲಿಂಮರಿಗೆ ಸರಿಯಾಗಿ ಶಿಕ್ಷಣ ವ್ಯವಸ್ಥೆ ಮಾಡಿದಿದ್ದರೆ, ಹೀಗೆ ಕಲ್ಲೇಟು ಯಾರು ಹೊಡೆಯುತ್ತಿದ್ದರು..? ಹೀಗೆ ರಸ್ತೆಯಲ್ಲಿ ನಿಂತು ಗಲಾಟೆ ಯಾರು ಮಾಡುತ್ತಿದ್ದರು..? ಎಂದು ಆ ವ್ಯಕ್ತಿ ಪ್ರಶ್ನಿಸಿದ್ದಾರೆ. ಬಳಿಕ ಅವರ ಅಕ್ಕಪಕ್ಕದಲ್ಲಿರುವ ವ್ಯಕ್ತಿಗಳನ್ನು ನೀವು ನಿರುದ್ಯೋಗಿಗಳೇ ಎಂದು ಕೇಳಿದಾಗ, ಅವರೆಲ್ಲ ಇಲ್ಲ ನಮಗೆ ಉದ್ಯೋಗವಿದೆ ಎಂದಿದ್ದಾರೆ. ಆಗ ಆ ವ್ಯಕ್ತಿ ಈ ದೇಶದಲ್ಲಿರುವ ನಿರುದ್ಯೋಗಿ ಅಂದ್ರೆ, ಅದು ರಾಹುಲ್ ಗಾಂಧಿ ಮಾತ್ರ ಎಂದಿದ್ದಾರೆ.

ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್‌ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ. ಕಾಂಗ್ರೆಸ್ ಗೆದ್ದರೆ ಸತ್ಯ ಗೆದ್ದಂತೆ: ಸಿಎಂ ಸಿದ್ದರಾಮಯ್ಯ

ನಿಮ್ಮ ಗೆಲುವಿನಲ್ಲಿ ದೇಶದ ಗೆಲುವಿದೆ: ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ವಿಶ್

About The Author