Friday, December 13, 2024

Latest Posts

‘ರಾಹುಲ್ ಗಾಂಧಿ ಮೆಲೆ‌ ‌ಚೀಟಿಂಗ್ ಕೇಸ್ ಇಲ್ವಾ..?, ರಾಹುಲ್ ಗಾಂಧಿನೂ ಅಪರಾಧಿನೇ’

- Advertisement -

Hubballi Political News: ಹುಬ್ಬಳ್ಳಿ: 32 ವರ್ಷದ ಹಿಂದಿನ ಕೇಸನ್ನು ರಿಓಪೆನ್ ಮಾಡಿದ್ದರ ವಿರುದ್ಧ ಇಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಮಾತನಾಡಿರುವ ಆರ್, ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇವತ್ತು ನಾವು ಹೋರಾಟ ಮಾಡುತ್ತೇವೆ. ಹಿಂದೂ ಕಾರ್ಯಕರ್ತನ ಬಂಧನದಿಂದ ಕೈ ಬಿಡಬೇಕು. ಇನ್ಸ್ಪೆಕ್ಟರ್ ಮೇಲೆ ಕ್ರಮ ಆಗಬೇಕು. ರಾಮ‌ಭಕ್ತರನ್ನ‌ ಭಂದಿಸಿದನ್ನ ಖಂಡಿಸುತ್ತೇನೆ. ರಾಮ ಭಕ್ತರನ್ನ ಬಂಧನ ಮಾಡೊ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ ಎಂದು ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಶಹರ ಪೋಲಿಸ್ ಠಾಣೆ ಎದರು ಪ್ರತಿಭಟನೆ ಮಾಡುತ್ತೆವೆ. ಸುಮಾರು 56,000 ಪೆಂಡಿಂಗ್ ಕೇಸ್ ಗಳು ಇವೆ. ಆದರೆ ಅವೆಲ್ಲವನ್ನ ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ. ಅದು ಕರಸೆವೆಕರನ್ನ ಹುಡುಕಿ ಬಂದನ ಮಾಡಿದ್ದು ನ್ಯಾಯಾನಾ..?. ಕಾನೂನು ಗೊತ್ತಿಲ್ಲ ಕಾಂಗ್ರೆಸ್ ಗೆ. ಇಷ್ಟೆಲ್ಲ ಆದ ಮೆಲೆ ಅವರನ್ನ ಬಂಧಿಸಿದ್ದು ಯಾಕೆ..? ರಾಮನ ಮೆಲೆ‌ ಕಾಂಗ್ರೆಸ್‌ಗೆ ಯಾಕೆ‌ ಕೋಪಾ..? ಕಾಂಗ್ರೆಸ್ ನಾಯಕನೊಬ್ಬ ಕೇಳಿದ್ದ ರಾಮ ಹುಟ್ಟಿದ್ದಕ್ಕೆ ಬರ್ತ್ ಸರ್ಟಿಫಿಕೇಟ್ ಇದೆನಾ ಅಂತ ಕೇಳಿದ್ದಾನೆ.

ರಾಹುಲ್ ಗಾಂಧಿ ಮೆಲೆ‌ ‌ಚೀಟಿಂಗ್ ಕೇಸ್ ಇಲ್ವಾ..? ಎಲ್ಲವನ್ನೂ ಬಿಡುಗಡೆ ಮಾಡಲಿ. ನ್ಯಾಯಾಲಯ ಶಿಕ್ಷೆ ಕೊಡಬೇಕು. ರಾಹುಲ್ ಬಂಧನವಾದಾಗ ದೇಶದಲ್ಲಿ ಪ್ರತಿಭಟನೆಗಳು ಆದವೂ. ಆಟೋ ಚಾಲಕನ ಮೆಲೆ ಯಾಕೆ ಇಂತಾ ದರ್ಪ..? ರಾಹುಲ್ ಗಾಂಧಿನೂ ಅಪರಾಧಿನೇ ಎಂದು ರಾಹುಲ್ ವಿರುದ್ಧ ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಕರಸೇವೆಯಲ್ಲಿ ಬಂಧನವಾದ ಹಿಂದೂ ಕಾರ್ಯಕರ್ತನನ್ನ ಬಿಡುಗಡೆ ಗೊಳಿಸಬೇಕು. ಹಿಂದೂ ಕಾರ್ಯಕರ್ತರನ್ನ ಹಡುಕಿ ಹುಡುಕಿ‌ ಕೇಸ್ ಹಾಕ್ತಾ ಇದಾರೆ. ಮೂವರು ಸತ್ತೋಗಿದ್ದಾರೆ ಐವರು ಪ್ರಕರಣದಲ್ಲಿ ಖುಲಾಸೆ ಯಾಗಿದ್ದಾರೆ. 69,000 ಸಾವಿರ ಎಲ್ ಪಿ ಎಸ್ ಕೇಸ್ ಗಳು ಇವೆ. ಆದರೆ ಹಿಂದೂ ಕಾರ್ಯಕರ್ತನ ಮೆಲೆ ಮಾಡಿದ್ದು ಸರಿ ಅಲ್ಲ. ಕೂಡಲೆ ಅವರನ್ನ ಬಂಧನದಿಂದ ಕೈ ಬಿಡಬೇಕು. ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತದೆ ಎಂದು ಆರ್, ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಯಾವುದೇ ಕಾರ್ಯಕ್ರಮ ಸರಿಯಾಗಿ ನಡೆಯಬಾರದು ಎಂದು ಪ್ಲಾನ್ ಮಾಡಿಕೊಂಡಿದೆ. ರಾಜ್ಯದಲ್ಲಿ ಲಾಂಗ್ ಕೆಂಡಿಂಗ್ ಕೇಸ್ ನಲ್ಲಿ 59,000 ಸಾವಿರ ಜನ ಇದ್ದಾರೆ. ಎಲ್ಲರನ್ನ ಬಂಧಿಸಿ ನೋಡೋಣ ತಾಕತ್ತಿದ್ದರೆ. ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ. ಕಾಂಗ್ರೆಸ್ ಪಕ್ಷಕ್ಕೆ‌ ಹುಚ್ಚ ಹಿಡದಿದೆ ಸೋಲಿನ ಭಯದಿಂದ ಹೀಗೆ ಮಾಡ್ತಾ ಇದಿರಾ..? ಮುಸ್ಲಿಂ ಸಮುದಾಯವನ್ನ ಓಲೈಕೆ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಅಯೋಧ್ಯೆಗೆ ಹೋಗಲು ನಿರಾಕರಿಸುತ್ತಿದ್ದವರೂ ಈಗ ಆಹ್ವಾನ ಬಯಸುತ್ತಿದ್ದಾರೆ: ಯೋಗಿ ಆದಿತ್ಯವಾಥ್

ರೋಗಿಯ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಮಾತ್ರ ICUಗೆ ದಾಖಲಿಸಬಹುದು: ಕೇಂದ್ರ ಆಸ್ಪತ್ರೆಯ ಹೊಸ ರೂಲ್ಸ್

ಇತಿಹಾಸದಲ್ಲಿ ಮೊದಲ ಬಾರಿಗೆ ಅಯ್ಯಪ್ಪಸ್ವಾಮಿಯ ದರ್ಶನ ಪಡೆದ ಮಂಗಳಮುಖಿ..

- Advertisement -

Latest Posts

Don't Miss