ರಾಯಚೂರು : ರಾಯಚೂರಿನ ಸಂಸದ ಕಚೇರಿಯಲ್ಲಿ ಸಂಸದರ ಅನುದಾನದಲ್ಲಿ ಆರು ಆಂಬುಲೆನ್ಸ್ (Ambulance) ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ (Halappa Achar)ಲೋಕಾರ್ಪಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚುನಾವಣೆ ಬಂದಿದೆ ಅಂತ ಕಾಂಗ್ರೆಸ್(Congress) ನವರು ಮೇಕೆದಾಟು ಯೋಜನೆ(mekedatu Plan) ಪಾದಯಾತ್ರೆ ಶುರು ಮಾಡಿಕೊಂಡಿದ್ದಾರೆ, ಹಾಗೂ ಅವರು ಅಧಿಕಾರದಲ್ಲಿದ್ದಾಗ ನೆನಪಾಗದ ಮೇಕೆದಾಟು ಯೋಜನೆ ಈಗ ನೆನಪಾಗಿದೆ. ಈಗ ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆಯ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದರು. ಈ ಹಿಂದೆ ಕಾಂಗ್ರೆಸ್ ನಡೆ ಕೃಷ್ಣೆ ಕಡೆ ಎಂಬ ಯಾತ್ರೆ ನಡೆಸಿದರು, ಆದರೆ ಕೃಷ್ಣಾ ಭಾಗದ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು, ಆದರೆ ಅವರ ಐದು ವರ್ಷದ ಅಧಿಕಾರ ಅವಧಿಯಲ್ಲಿ ಕೇವಲ 7500 ಕೋಟಿ ರೂ ಮಾತ್ರ ನೀಡಿದ್ದಾರೆ. ಅವರು ಮಾಡಿದ ಎಡವಟ್ಟಿನಿಂದ ಎಲ್ಲಾ ಯೋಜನೆಗಳಿಗೆ ಗ್ರಹಣ ಹಿಡಿದಿದೆ. ಇದರಿಂದ ಉತ್ತರ ಕರ್ನಾಟಕದ (North Karnataka)ಭಾಗದಲ್ಲಿ ಅವರ ನಾಟಕ ಬಯಲಾಗಿದೆ ಅದಕ್ಕಾಗಿ ಈಗ ಈ ಭಾಗದಲ್ಲಿ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದರು.
ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು.