Raichur : ಹಟ್ಟಿ ಚಿನ್ನದ ಗಣಿಯಲ್ಲಿ ಅಪ್ಪು ಹುಟ್ಟು ಹಬ್ಬ ಆಚರಣೆ..!

ರಾಯಚೂರು : ಡಾ.ಪುನೀತ್ ರಾಜಕುಮಾರ (puneeth rajkumar) 47 ನೇ ಜನ್ಮದಿನದ ಹಿನ್ನೆಲೆ ದೇಶದ ಪ್ರತಿಷ್ಠಿತ ಹಟ್ಟಿ ಚಿನ್ನದ ಗಣಿಯಲ್ಲಿ (Hatti gold mine) ಅಪ್ಪು ಹುಟ್ಟು ಹಬ್ಬ (Birthday of Appu) ಆಚರಣೆಯನ್ನು ಅತ್ಯಂತ ಸಡಗರದಿಂದ ಮಾಡಲಾಯಿತು. ಅಪ್ಪು ಭಾವಚಿತ್ರವಿರೊ ಕನ್ನಡ ಭಾವುಟ ಅನಾವರಣ ಮಾಡಿ. ಕಂಠೀರವ ಸ್ಟುಡಿಯೋದ ಸಮಾಧಿ ಹೋಲುವಂತೆ ಇಲ್ಲಿಯೂ ಅದೇ ರೀತಿ ಡೆಕೋರೇಶನ್ (Decoration) ಮಾಡಿ ಹಟ್ಟಿ ಚಿನ್ನದ ಗಣಿಯಲ್ಲಿ ಅದೇ ಮಾದರಿಯಲ್ಲಿ ಅಲಂಕಾರ ಮಾಡಿ ಅನಾಥ ಮಕ್ಕಳಿಂದ ಕೇಕ್ (Cake) ಕತ್ತರಿಸೊ ಮೂಲಕ ಅಪ್ಪು ಹಬ್ಬ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಹಟ್ಟಿ ಗೋಲ್ಡ್‌ಮೈನ್ ಅಧ್ಯಕ್ಷ ಮಾನಪ್ಪ ಡಿ ವಜ್ಜಲ್ (Manappa D Vajjal) ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು. ಹಟ್ಟಿ ಚಿನ್ನದ ಗಣಿ ವತಿಯಿಂದ ರಕ್ತದಾನ ಶಿಬಿರ (Blood donation camp) ಅನ್ನ ದಾಸೋಹ ಕಾರ್ಯಕ್ರಮ ಹಾಗೂ ಸಂಜೆ ಅಪ್ಪು ಆರ್ಕೆಸ್ಟ್ರಾ (Orchestra) ಅಪ್ಪು ಹುಟ್ಟು ಹಬ್ಬ ಆಚರಣೆಗೆ ಜನಸಾಗರ ಹರಿದು ಬಂದಿತ್ತು.

https://www.youtube.com/watch?v=Rf64VbYDLsk

About The Author