Saturday, July 20, 2024

Latest Posts

RAICHUR : ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ..!

- Advertisement -

ರಾಯಚೂರು : ರಾಯಚೂರು ಆರ್ಥಿಕವಾಗಿ (Raichur financially) ಮಾತ್ರವಲ್ಲ ಆರೋಗ್ಯವಾಗಿಯೂ ತೀರಾ ಹಿಂದುಳಿದ‌ ಜಿಲ್ಲೆ. ಇಲ್ಲಿ ಅವರಿವರು ನಡೆಸುವ ಆರೋಗ್ಯ ತಪಾಸಣಾ ಶಿಬಿರಗಳೇ ಬಡವರಿಗೆ ವರದಾನವಾಗಿವೆ. ಇಂದೂ‌ ಸಹ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬರೋಬ್ಬರಿ 20 ಸಾವಿರಕ್ಕೂ ಅಧಿಕ ರೋಗಿಗಳು ನೋಂದಣಿ ಮಾಡಿಸಿಕೊಂಡಿದ್ದು, 220 ವೈದ್ಯರಿಂದ ಹೆಲ್ತ್ ಚೆಕಪ್ ಮಾಡಲಾಗಿದೆ. ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ಬಸನಗೌಡ ಬಾದರ್ಲಿ (Basanagowda Badarli) ಫೌಂಡೇಶನ್ ವತಿಯಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದೆ. ವಿಶೇಷ ಅಂದ್ರೆ ಈ ಹೆಲ್ತ್ ಕ್ಯಾಂಪ್ (Health Camp)ಗೆ ಬೆಂಗಳೂರು, ಬಳ್ಳಾರಿ, ಕಲಬುರಗಿ, ಕೊಪ್ಪಳ ಹಾಗೂ ರಾಯಚೂರಿನ ಹತ್ತಾರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ (Super Specialty Hospital) ವೈದ್ಯರು ರೋಗಿಗಳ ತಪಾಸಣೆ ನಡೆಸಿದ್ದು, ಬರೋಬ್ಬರಿ 20 ಸಾವಿರಕ್ಕೂ ಅಧಿಕ ರೋಗಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಸಿಂಧನೂರು ನಗರದ ಡಿಗ್ರಿ ಕಾಲೇಜಿನಲ್ಲಿ (Degree College of Sindhanur City) ನಡೆದ ಆರೋಗ್ಯ ತಪಾಸಣಾ ಶಿಬಿರಕ್ಕೆ ಪ್ರತೀ ಗ್ರಾಮದಿಂದ ಹತ್ತಾರು ರೋಗಿಗಳು ಬಂದು ಚಿಕಿತ್ಸೆ ಪಡೆದಿದ್ದು, ಬಸನಗೌಡ ಬಾದರ್ಲಿ ಫೌಂಡೇಶನ್ ಗೆ ಧನ್ಯವಾದ ತಿಳಿಸಿದ್ದಾರೆ. ಅನ್ನಪೂರ್ಣ, ತಪಾಸಣೆಗೆ ಬಂದವರು. ಇನ್ನೂ ಈ ಕಾರ್ಯಕ್ರಮದ ರೂವಾರಿಯಾದ ಕಾಂಗ್ರೆಸ್ ನ ನಾಯಕ ಮಾಜಿ ಯುವ ಕಾಂಗ್ರೆಸ್ ಘಟಕ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್ (Covid) ನ ಈ‌ ಮೂರು ಅಲೆಯಲ್ಲಿ ಬಸನಗೌಡ ಬಾದರ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತ ಆಕ್ಸಿಜನ್ ಸಿಲಿಂಡರ್ ಗಳ ಪೂರೈಕೆ ಮಾಡಿ ಇಡೀ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲದಂತೆ ಮಾಡಿದ್ರು. ಸದ್ಯ ಇದೀಗ ಹಮ್ಮಿಕೊಂಡ ಆರೋಗ್ಯ ಶಿಬಿರವೂ ಸಕ್ಸಸ್ ಫುಲ್ ಆಗಿ ಮುಗಿದಿದ್ದು, ಯಾರಿಗೆ ಯಾವುದೇ ತರಹದ ಆಪರೇಷನ್ ಅಥವಾ ಚಿಕಿತ್ಸೆ ಇದ್ರೂ ಅವರಿಗೆ ಬಸನಗೌಡ ಬಾದರ್ಲಿ ವೆಚ್ಚ ಭರಿಸುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸಿಂಧನೂರು ಜನರಿಗಾಗಿ ಅವರ ಆರೋಗ್ಯಕ್ಕಾಗಿ ನನ್ನ ಆಸ್ತಿ ಮಾರಲು ಸಹ ಸಿದ್ಧನಿದ್ದೇನೆ ಎಂದಿದ್ದಾರೆ. ಇನ್ನೂ ಇದೇ ಶಿಬಿರದಲ್ಲಿ ಹತ್ತಾರು ಜನ ನೇತ್ರದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ. ಒಟ್ಟಾರೆ ಹತ್ತಾರು ವಿಶೇಷತೆಯೊಂದಿಗೆ ನಡೆದ ಬಸನಗೌಡ ಬಾದರ್ಲಿ ಫೌಂಡೇಶನ್ ನ ಈ ಆರೋಗ್ಯ ತಪಾಸಣಾ ಶಿಬಿರ ಬಡಬಗ್ಗರಿಗೆ ಅನೂಕೂಲವಾಗಿದ್ದು, ಈ ರೀತಿಯ ಹೆಲ್ತ್ ಕ್ಯಾಂಪ್ ಆಗಾಗ ನಡೀತಾ ಇರಲಿ ಎಂಬದು ಜನರ ಅಭಿಪ್ರಾಯವಾಗಿದೆ.

- Advertisement -

Latest Posts

Don't Miss