ರಾಯಚೂರು: ಹಿಜಾಬ್ ಕೇಸರಿ ಶಾಲು ವಿವಾದ (Hijab saffron shawl controversy) ಹಿನ್ನಲೆ ರಜೆ ನೀಡಿದ ಪಿಯು ಮತ್ತು ಪದವಿ ಕಾಲೇಜು (PU and graduate college) ಇಂದು ಪುನಾರಂಭವಾಗಿವೆ. ಬಾಲಕಿಯರ ಸರಕಾರಿ ಪದವಿ ಪೂರ್ವಕಾಲೇಜು, ರಾಯಚೂರಿನಲ್ಲಿ ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಕಾಲೇಜು ಆವರಣದೊಳಗೆ ತೆರಳಿದ ವಿದ್ಯಾರ್ಥಿನಿಯರನ್ನು ಶಾಲೆಯ ಆವರಣದಲ್ಲಿ ಹಿಜಾಬ್ ತೆಗೆಸಿ ಕೊಠಡಿಯಲ್ಲಿ ಕುರಿಸಿದರು . ಇನ್ನೂ ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾದ್ಯಮದವರನ್ನ ಕಾಲೇಜು ಒಳಗಡೆ ಪ್ರವೇಶ ಮಾಡದಂತೆ ಪೋಲಿಸ್ ಸಿಬ್ಬಂದಿಗಳಿಗೆ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದರು. ಕಾಲೇಜಿನ ಕೊಠಡಿಯಲ್ಲಿ ಬುರ್ಕಾ ಹಾಗೂ ಹಿಜಾಬ್ ತೆಗೆದು ತರಗತಿ ಕೊಠಡಿಗೆ ತೆರಳಲಿದ್ದಾರೆ ಎಂದು ಕುಂಟೆಪ್ಪ ಗೌರಿಪುರ (Kunteppa Gauripura ) ಪಾಚಾರ್ಯರು ಮಾದ್ಯಮ ಮಿತ್ರರಿಗೆ ಮಾಹಿತಿ ನೀಡಿದರು.
ಅನಿಲ್ ಕುಮಾರ್ , ಕರ್ನಾಟಕ ಟಿವಿ, ರಾಯಚೂರು.