Tuesday, April 15, 2025

Latest Posts

ಅನ್ನಪೂರ್ಣಿ ಸಿನಿಮಾ ಡೈಲಾಗ್ ವಿರುದ್ಧ ರಾಮಭಕ್ತರ ಆಕ್ರೋಶ..!

- Advertisement -

Movie News: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಮಧ್ಯೆ ಸಿನಿಮಾ ಡೈಲಾಗ್ ಒಂದು ಸದ್ದು ಮಾಡುತ್ತಿದ್ದು, ಇದರ ವಿರುದ್ಧ ರಾಮ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.

ನಯನತಾರಾ ಅಭಿನಯದ ಅನ್ನಪೂರ್ಣಿ ಸಿನಿಮಾ ಡೈಲಾಗಿ ಇದಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ರಾಮನೂ ಕೂಡ ವನವಾಸದಲ್ಲಿ ಮಾಂಸಾಹಾರ ಸೇವಿಸಿದ್ದ ಎಂಬ ಡೈಲಾಗ್ ಇದಾಗಿದೆ. ಹಾಗಾಗಿ ಈ ಸಿನಿಮಾ ತಂಡ, ರಾಮಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಡಿಸೆಂಬರ್ 1ರಂದು ರಿಲೀಸ್ ಆಗಿದ್ದ ಸಿನಿಮಾ, ಅದಾಗಲೇ ಓಟಿಟಿಗೆ ಬಂದಾಗಿದೆ.

ನೆಟ್‌ಫ್ಲಿಕ್ಸ್‌ನನಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ಜೊತೆ ನೆಟ್‌ಫ್ಲಿಕ್ಸ್‌ ಕೂಡ ಬಾಯ್‌ಕಾಟ್ ಮಾಡಬೇಕಿದೆ. ಏಕೆಂದರೆ ಇವರುಗಳು ಹಿಂದೂಗಳ ಭಾವನೆ ಜೊತೆ ಆಟವಾಡುತ್ತಿದ್ದಾರೆಂದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ನಿರ್ಮಾಪಕರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್‌ದಾರೆ ಎಂದು, ಸಿನಿಮಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಸಿನಿಮಾದಲ್ಲಿ ನಯನತಾರಾ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳಾಗಿರುತ್ತಾಳೆ. ಆದರೆ ಅವಳು ಶೆಫ್ ಆದಾಗ, ಅವಳಿಗೆ ಮಾಂಸಾಹಾರ ತಯಾರಿಸುವ ಸಂದರ್ಭ ಬರುತ್ತದೆ. ಆ ವೇಳೆ ನಟಿ ಹಿಂಜರಿಯುವಾಗ, ನಟ ಶ್ರೀರಾಮ ಕೂಡ ವನವಾಸದಲ್ಲಿ ಮಾಂಸಾಹಾರ ಸೇವನೆ ಮಾಡಿದ್ದನೆಂದು ಹೇಳಿ, ನಟಿಗೆ ಮಾಂಸಾಹಾರ ತಯಾರಿಸಲು ಪ್ರೇರೇಪಿಸುತ್ತಾನೆ.

ದುಬೈನಲ್ಲಿ ಹುಲಿ ಜೊತೆ ಪೋಸ್ ಕೊಟ್ಟ ಡಿ ಬಾಸ್ ದರ್ಶನ್..

ರಾಮಮಂದಿರಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟಿ ಪ್ರಣಿತಾ..

ಸಂಗೀತ ಮಾಂತ್ರಿಕ ಉಸ್ತಾದ್ ರಷೀದ್ ಖಾನ್‌ ಇನ್ನಿಲ್ಲ..

- Advertisement -

Latest Posts

Don't Miss