Movie News: ತಮಿಳಿನ ಅನ್ನಪೂರ್ಣಿ ಸಿನಿಮಾದಲ್ಲಿ ರಾಮ ಕೂಡ ವನವಾಸದಲ್ಲಿ ಮಾಂಸಾಹಾರಿಯಾಗಿದ್ದ ಎಂಬ ಡೈಲಾಗ್ ಇದ್ದು, ಈ ವಿರುದ್ಧ ರಾಮಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಿನಿಮಾ ಮಾತ್ರವಲ್ಲದೇ, ನೆಟ್‌ಫ್ಲಿಕ್ಸ್ ಕೂಡ ಬ್ಯಾನ್ ಮಾಡಬೇಕು ಎಂದು ಅಭಿಯಾನ ನಡೆಸಿದ್ದರು. ಹಾಗಾಗಿ ಕೂಡಲೇ ಎಚ್ಚೆತ್ತುಕೊಂಡಿರುವ ನೆಟ್‌ಫ್ಲಿಕ್ಸ್ ಸಿನಿಮಾವನ್ನ ಡಿಲೀಟ್ ಮಾಡಿ, ಕ್ಷಮೆ ಕೇಳಿದೆ.
ಶಿವಸೇನೆ ಮಾಜಿ ನಾಾಯಕ ರಮೇಶ್ ಸೋಲಂಕಿ ಈ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ನೆಟ್‌ಫ್ಲಿಕ್ಸ್ ತನ್ನ ಆ್ಯಪ್‌ನಿಂದ ಸಿನಿಮಾ ಡಿಲೀಟ್ ಮಾಡಿದ್ದು, ನಿರ್ಮಾಣ ಸಂಸ್ಥೆಯಾದ ಜೀ ಸ್ಚುಡಿಯೋ ಕೂಡ ಕ್ಷಮೆ ಕೇಳಿದೆ.
ಡಿಸೆಂಬರ್ 1ರಂದು ರಿಲೀಸ್ ಆಗಿದ್ದ ಸಿನಿಮಾ, ಅದಾಗಲೇ ಓಟಿಟಿಗೆ ಬಂದಾಗಿದೆ. ನೆಟ್‌ಫ್ಲಿಕ್ಸ್‌ನನಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಸಿನಿಮಾ ಜೊತೆ ನೆಟ್‌ಫ್ಲಿಕ್ಸ್ ಕೂಡ ಬಾಯ್‌ಕಾಟ್ ಮಾಡಬೇಕಿದೆ ಎಂದು ಜನ ಅಭಿಯಾನ ಶುರು ಮಾಡಿದ್ದರು. ಏಕೆಂದರೆ ಇವರುಗಳು ಹಿಂದೂಗಳ ಭಾವನೆ ಜೊತೆ ಆಟವಾಡುತ್ತಿದ್ದಾರೆಂದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ನಿರ್ಮಾಪಕರು ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್‌ದಾರೆ ಎಂದು, ಸಿನಿಮಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ನೆಟ್‌ಫ್ಲಿಕ್ಸ್ ಸಿನಿಮಾ ಡಿಲೀಟ್ ಮಾಡಿ, ಕ್ಷಮೆಯಾಚಿಸಿದೆ.
ಈ ಸಿನಿಮಾದಲ್ಲಿ ನಯನತಾರಾ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳಾಗಿರುತ್ತಾಳೆ. ಆದರೆ ಅವಳು ಶೆಫ್ ಆದಾಗ, ಅವಳಿಗೆ ಮಾಂಸಾಹಾರ ತಯಾರಿಸುವ ಸಂದರ್ಭ ಬರುತ್ತದೆ. ಆ ವೇಳೆ ನಟಿ ಹಿಂಜರಿಯುವಾಗ, ನಟ ಶ್ರೀರಾಮ ಕೂಡ ವನವಾಸದಲ್ಲಿ ಮಾಂಸಾಹಾರ ಸೇವನೆ ಮಾಡಿದ್ದನೆಂದು ಹೇಳಿ, ನಟಿಗೆ ಮಾಂಸಾಹಾರ ತಯಾರಿಸಲು ಪ್ರೇರೇಪಿಸುತ್ತಾನೆ.