Bengaluru News: ರಾಮೇಶ್ವರಂ ಕೆಫೆಯಲ್ಲಿ ಎರಡು ದಿನಗಳ ಹಿಂದೆ ಬಾಂಬ್ ಬ್ಲಾಸ್ಟ್ ಆಗಿದ್ದು, ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮಾಲೀಕ ರಾಘವೇಂದ್ರ ರಾವ್, ಶಿವರಾತ್ರಿಯಂದೇ ರಾಮೇಶ್ವರಂ ಕೆಫೆಯನ್ನು ರಿಸ್ಟಾರ್ಟ್ ಮಾಡಲಿದ್ದೇವೆ ಎಂದಿದ್ದಾರೆ.
ಇದೇ ಶುಕ್ರವಾರ ಮಾರ್ಚ್ 8ರಂದು, ಶಿವರಾತ್ರಿಯ ದಿನ ಕುಂದನಹಳ್ಳಿಯಲ್ಲಿ ರಾಮೇಶ್ವರಂ ಕೆಫೆ ಮತ್ತೆ ಆರಂಭವಾಗಲಿದೆ. ಎಲ್ಲ ರಾಮೇಶ್ವರಂ ಕೆಫೆಯಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಿ, ಬ್ಯಾಗ್ ಚೆಕ್ ಮಾಡಿ, ಒಳಗೆ ಬಿಡುವಂತೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಭದ್ರತಾ ಸಿಬ್ಬಂದಿಗಳನ್ನು ಇರಿಸಿ, ಬ್ಯಾಗ್ ಚೆಕ್ ಮಾಡಿ, ಗ್ರಾಹಕರನ್ನು ಒಳಗೆ ಬಿಡಲಾಗುತ್ತಿದೆ.ಇನ್ನು ಕೆಲ ದಿನಗಳಲ್ಲೇ ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತದೆ ಎಂದಿದ್ದಾರೆ.
ಅಲ್ಲದೇ ನಾವು ಏಕಾಏಕಿ ಶ್ರೀಮಂತರಾದವರಲ್ಲ. ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬಂದಿದ್ದೇವೆ. ಫುಟ್‌ಪಾತ್‌ನಲ್ಲಿ ಹೊಟೇಲ್ ಆರಂಭಿಸಿ, ಇಲ್ಲಿಯತನಕ ಬಂದಿದ್ದೇವೆ. ನಮ್ಮಲ್ಲಿ ಕೆಲಸ ಮಾಡುವವರೆಲ್ಲರೂ, ಹಳಿ ಬದಿ ಜನ. ಹೊಟ್ಟೆಪಾಡಿಗಾಗಿ ಇಲ್ಲಿ ಬಂದು ದುಡಿಯುತ್ತಿದ್ದಾರೆ. ನಮ್ಮ ಕೆಫೆ ಆಶ್ರಯ ತಾಣವಾಗಿದೆ. ಇಂಥ ಕೃತ್ಯಗಳನ್ನು ನಾವು ಖಂಡಿಸಬೇಕು ಎಂದು ರಾಘವೇಂದ್ರ ರಾವ್ ಹೇಳಿದ್ದಾರೆ.
ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..
ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು

