ಕೊನೆಗೂ ಮಗಳ ಮುಖವನ್ನನು ರಿವೀಲ್ ಮಾಡಿದ ರಣಬೀರ್ ಕಪೂರ್- ಆಲಿಯಾ

Movie News: ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು, ದೃಷ್ಟಿಯಾಗುತ್ತದೆ ಎಂದು ತಮ್ಮ ಮಕ್ಕಳ ಮುಖವನ್ನು ಬೇಗ ರಿವೀಲ್ ಮಾಡುವುದಿಲ್ಲ. ಅದೇ ರೀತಿ ನಟ ರಣಬೀರ್ ಮತ್ತು ಆಲಿಯಾ ಭಟ್ ಕೂಡ ತಮ್ಮ ಮಗಳಾದ ರಹಾ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇಂದು ಕ್ರಿಸ್‌ಮಸ್ ಹಬ್ಬದ ದಿನ, ಕೊನೆಗೂ ಆಲಿಯಾ- ರಣಬೀರ್ ರಹಾ ಮುಖವನ್ನು ರಿವೀಲ್ ಮಾಡಿದ್ದು, ಮಗು ಥೇಟ್ ಅಮ್ಮನ ಹಾಗೇ ಇದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಬ್ಯಾಕ್ ಟೂ ಬ್ಯಾಕ್ ಬ್ರೇಕ್‌ಅಪ್ ಮಾಡಿಕೊಂಡಿದ್ದ ರಣಬೀರ್ ಮದುವೆನೇ ಆಗಲ್ವಾ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಆದರೆ 2022ರಲ್ಲಿ ಕೊನೆಗೂ ರಣಬೀರ್ ತಾವು ಪ್ರೀತಿಸಿದ ಆಲಿಯಾರನ್ನು ವಿವಾಹವಾದರು. ಕೆಲವು ಗುಸು ಗುಸು ಪ್ರಕಾರ, ಆಲಿಯಾ ವಿವಾಹಕ್ಕೂ ಮುನ್ನವೇ ಗರ್ಭಿಣಿಯಾಗಿದ್ದರು. ಹಾಗಾಗಿ ಗಡಿಬಿಡಿಯಲ್ಲಿಯೇ ಮದುವೆ ನಡೆದು ಹೋಯಿತು ಅಂತಾ ಹೇಳಲಾಗುತ್ತಿತ್ತು.

ಬಳಿಕ 2022 ನವೆಂಬರ್‌ ನಲ್ಲೇ ರಹಾ ಜನಿಸಿದ್ದು, ಇದೀಗ ಆಕೆಗೆ ಪೂರ್ತಿ ಒಂದು ವರ್ಷ ತುಂಬಿದೆ. ಹೀಗಾಗಿ ಕ್ರಿಸ್‌ಮಸ್‌ ಹಬ್ಬದ ಸ್ಪೆಶಲ್ ಆಗಿ, ತಾರಾ ದಂಪತಿ ರಾಹಾಳ ಮುಖವನ್ನು ರಿವೀಲ್ ಮಾಡಿದ್ದಾರೆ. ಇನ್ನು ಕ್ರಿಸ್‌ಮಸ್ ಪಾರ್ಟಿ ಆಚರಣೆ ವೇಳೆ ಪಾಪರಾಜಿಗಳಿಗೆ, ರಣಬೀರ್ ಆಲಿಯಾ ಮಗುವಿನೊಂದಿಗೆ ಪೋಸ್ ಕೊಟ್ಟಿದ್ದು, ರಾಹಾ ಕೂಡ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾಳೆ.

ಸಿದ್ದರಾಮಯ್ಯ ಮುಗ್ಧ ಅಲ್ಲ, ಧೂರ್ತರಿದ್ದಾರೆ – ಕೇಂದ್ರ ಸಚಿವ ಜೋಶಿ ಕಿಡಿ

ಬಿ.ಕೆ.ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

ಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ: ಜಗದೀಶ್ ಶೆಟ್ಟರ್

About The Author