ನಟಿ ರಚನಾ ಇಂದರ್ ಕರ್ನಾಟಕ ಟಿವಿ ಜೊತೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ. ತ್ರಿಬಲ್ ರೈಡಿಂಗ್, ಹರಿಕಥೆ ಅಲ್ಲಾ ಗಿರಿಕಥೆ, ಲವ್ ಮಾಕ್ಟೇಲ್, ಲವ್ 360 ಸಿನಿಮಾ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾವು ಆ್ಯಕ್ಟ್ ಮಾಡುವಾಗ, ಆಡಿಶನ್ ಕೊಡುವಾಗ ತಮಗಾದ ಅನುಭವದ ಬಗ್ಗೆ ರಚನಾ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ರ್ಯಾಪಿಡ್ ಪ್ರಶ್ನೆಗಳಿಗೂ ರಚನಾ ಉತ್ತರಿಸಿದ್ದಾರೆ. ಅವರಿಗೆ ಕೇಳಿದ ಪ್ರಶ್ನೆ ಮತ್ತು ಅವರು ಕೊಟ್ಟ ಉತ್ತರ ಹೇಗಿದೆ ಅಂತಾ ನೋಡಿ..
ನಿಮಗೆ ನಿಮ್ಮ ಮುಖದ ಯಾವ ಭಾಗ ಚೆಂದ ಎನ್ನಿಸುತ್ತದೆ..?
ಚೆಂದ ಅನ್ನೋ ಬದಲು, ನನ್ನನ್ನು ನೋಡಿದಾಗ ಮೊದಲು ಎದ್ದು ಕಾಣೋದೇ ನನ್ನ ಕಿವಿ. ಎಲ್ಲರೂ ಅದರ ಬಗ್ಗೆನೇ ಮಾತಾಡ್ತಾರೆ.
ನೀವು ಕ್ಯೂಟ್ ಇಷ್ಟಾಪಡ್ತೀರೋ, ಹಾಟ್ ಇಷ್ಟಾ ಪಡ್ತೀರೋ..?
ಕ್ಯೂಟ್ ಇಷ್ಟಾಪಡೀನಿ..
ಡಾರ್ಲಿಂಗ್ ಕೃಷ್ಣಾ ಅಥವಾ ಶಶಾಂಕ್ ಸರ್..?
ಒಬ್ಬರನ್ನ ಸೆಲೆಕ್ಟ್ ಮಾಡೋಕ್ಕೆ ಆಗಲ್ಲ. ಇಬ್ಬರೂ ಇಂಪಾರ್ಟೆಂಟ್.
ದರ್ಶನ್ ಅಥವಾ ಸುದೀಪ್..?
ನಾನು ಸುದೀಪ್ ಸರ್ನಾ ಮೀಟ್ ಮಾಡಿದ್ದೆ, ಸುದೀಪ್ ಸರ್.
ರಚಿತಾ ರಾಮ್ ಅಥವಾ ರಾಧಿಕಾ ಪಂಡೀತ್..?
ಈ ಪ್ರಶ್ನೆಗೆ ರಚನಾ, ನೀವು ಹೀಗೆಲ್ಲಾ ಕೇಳ್ಬಾರ್ದು ಅಂತಾ ಹೇಳಿದ್ರು. ಯಾಕಂದ್ರೆ ನಾನು ಪ್ರತೀ ಸಿನಿಮಾ ನೋಡಿದ ಮೇಲೂ ಅದರಲ್ಲಿ ಯಾವ ನಟಿ ನಟ ಇರ್ತಾರೋ ಅವರ ಫ್ಯಾನ್ ಆಗ್ತೀನಿ ಅಂತಾ ಹೇಳಿದ್ರು.
ಒಳ್ಳೆ ಪುಡ್ ಅಥವಾ ನಿದ್ದೆ..?
ನಿದ್ದೆ..
ಲವ್ ಮಾಕ್ಟೇಲ್ 1 ಅಥವಾ ಲವ್ ಮಾಕ್ಟೇಲ್ 2..?
ಲವ್ ಮಾಕ್ಟೇಲ್ 1..
ನಿಮ್ಮ ಫೇವರಿಟ್ ಸಾಂಗ್..?
ರಾಜ್ಕುಮಾರ್ ಅವ್ರದ್ದು ನೀ ಬಂದು ನಿಂತಾಗ, ನಕ್ಕು ನೀ ನಲಿದಾಗ..
ಇನ್ನು ಕೊನೆಯದಾಗಿ ತಮ್ಮನ್ನು ಇಷ್ಟಪಟ್ಟ ಪ್ರೇಕ್ಷಕರಿಗೆ ರಚನಾ ಧನ್ಯವಾದ ಹೇಳಿದ್ದಾರೆ.