Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರೂ, ಇದುವರೆಗೂ ರಶ್ಮಿಕಾ ಆಗಲಿ ವಿಜಯ್ ಆಗಲಿ ಓಪನ್ ಆಗಿ ಅದನ್ನು ಒಪ್ಪಿಕೊಂಡಿಲ್ಲ. ರಶ್ಮಿಕಾ ವಿಜಯ್ ಮನೆಗೆ ಹೋಗುವುದು, ಹಬ್ಬ ಆಚರಿಸುವುದು, ಟೈಮ್ ಸ್ಪೆಂಡ್ ಮಾಡುವುದು, ವಿಜಯ್ ಜೊತೆ ವಿದೇಶ ಪ್ರಯಾಣ ಮಾಡುವುದು. ಇದನ್ನೆಲ್ಲ ಮಾಡುತ್ತಿರುತ್ತಾರೆ.
ಆದರೆ ಈ ಬಗ್ಗೆ ಕೇಳಿದಾಗ, ಇಬ್ಬರೂ ಹಾರಿಕೆಯ ಉತ್ತರವೇ ನೀಡುತ್ತಾರೆ. ಇದೀಗ ರಶ್ಮಿಕಾ ಮಂದಣ್ಣ ತಾವು ನಟಿಸಿರುವ ಪುಷ್ಪ 2 ಸಿನಿಮಾವನ್ನು ವಿಜಯ್ ದೇವರಕೊಂಡ ಫ್ಯಾಮಿಲಿ ಜೊತೆ ವೀಕ್ಷಿಸಿದ್ದಾರೆ. ಪುಷ್ಪ 2 ಸಿನಿಮಾ ನಿರೀಕ್ಷೆಗಿಂತಲೂ ಹೆಚ್ಚು ಗಳಿಕೆ ಮಾಡಿದ್ದು, ಅತೀ ಹೆಚ್ಚು ಮುಂಗಡ ಟಿಕೇಟ್ ಬುಕ್ ಆಗಿದೆ.
ಈ ಮಧ್ಯೆ ರಶ್ಮಿಕಾ ವಿಜಯ್ ಫ್ಯಾಮಿಲಿ ಜೊತೆೆ ಹೈದರಾಬಾದ್‌ನ ಎಎಂಬಿ ಸಿನಿಮಾಸ್ ನಲ್ಲಿ ಪುಷ್ಪ2 ಸಿನಿಮಾ ವೀಕ್ಷಿಸಿದ್ದಾರೆ. ವಿಜಯ್ ತಾಯಿ ಮತ್ತು ತಮ್ಮನ ಜೊತೆಗೂಡಿ, ರಶ್ಮಿಕಾ ಚಿತ್ರ ವೀಕ್ಷಿಸಿದ್ದು, ವಿಜಯ್ ಜೊತೆ ರಶ್ಮಿಕಾ ಕಾಣಿಸಿಕೊಂಡಿಲ್ಲ. ಆದರೆ ರಶ್ಮಿಕಾ ವಿಜಯ್ ಫ್ಯಾಮಿಲಿ ಜೊತೆಗೂ ಇಷ್ಟು ಕ್ಲೋಸ್ ಇದ್ದಾರೆ ಅಂದ್ರೆ, ಅತೀ ಶಿಘ್ರದಲ್ಲೇ ತಾವು ನಿರೀಕ್ಷಿಸಿದ ನ್ಯೂಸ್ ಕೊಡಲಿದ್ದಾರೆ ಅಂತಾನೇ ಫ್ಯಾನ್ಸ್ ಅಂದಾಜು ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಪುಷ್ಪ 2 ಪ್ರಮೋಷನ್ ಕಾರ್ಯಕ್ರಮದಲ್ಲಿ ನಿರೂಪಕರು ನೀವು ಸಿನಿರಂಗದಲ್ಲಿ ಇದ್ದವರೊಂದಿಗೆ ವಿವಾಹವಾಗುತ್ತೀರಾ..ಅಥವಾ ಹೊರಗಿನವರನ್ನು ವಿವಾಹವಾಗುತ್ತೀರಾ ಎಂದು ಕೇಳಿದಾಗ, ಆ ವಿಷಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಎನ್ನುವ ಮೂಲಕ, ರಶ್ಮಿಕಾ ಇಂಡೈರೆಕ್ಟ್ ಆಗಿ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುತ್ತಿರುವ ಬಗ್ಗೆ ಕನ್ಫರ್ಮ್ ಮಾಡಿದ್ದರು.