Sandalwood News: ನಟಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ಹೊಸತರಲ್ಲಿ ಕರ್ನಾಟಕದ ಕ್ರಶ್ ಆಗಿದ್ದರು. ಈ ಸಿನಿಮಾ ಸೆಟ್‌ನಲ್ಲೇ ರಶ್ಮಿಕಾ ಮತ್ತು ರಕ್ಷಿತ್ ಲವ್ ಶುರುವಾಗಿತ್ತು. ಮನೆಯವರ ಒಪ್ಪಿಗೆಯ ಮೇರೆಗೆ ಇವರಿಬ್ಬರು ಎಂಗೇಜ್‌ಮೆಂಟ್ ಸಹ ಮಾಡಿಕೊಂಡರು. ಆದರೆ ಈ ಪ್ರೀತಿ ತುಂಬ ದಿನ ನಿಲ್ಲಲಿಲ್ಲ. ರಶ್ಮಿಕಾ ತೆಲುಗು ನಟ ವಿಜಯ್ ದೇವರಕೊಂಡ ಜೊತೆ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕ ಬಳಿಕ, ರಕ್ಷಿತ್ ಜೊತೆ ಬ್ರೇಕಪ್ ಮಾಡಿಕೊಂಡು ಎಂಗೇಜ್‌ಮೆಂಟ್ ಮುರಿದುಕೊಂಡರು.
ಈ ಘಟನೆ ಬಳಿಕ ಅವರು ಹಲವು ಕನ್ನಡಿಗರಿಗೆ ವಿರೋಧಿಗಳೇ ಆಗಿದ್ದಾರೆ. ಅವರು ನಡೆದುಕೊಳ್ಳುವ ರೀತಿಯೂ ಅದೇ ರೀತಿ ಇದೆ. ನನಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಅಂತಾ ಹೇಳೋದು. ಕರ್ನಾಟಕದಲ್ಲಿ ಕನ್ನಡ ಸಿನಿಮಾ ಪ್ರಮೋಷನ್‌ಗೆ ಬಂದು, ತೆಲುಗುನಲ್ಲಿ ಮಾತನಾಡುವುದು. ಇದೆಲ್ಲದರಿಂದ ರಶ್ಮಿಕಾಳನ್ನು ಕನ್ನಡಿಗರು ಇನ್ನಷ್ಟು ಹೇಟ್ ಮಾಡಲು ಶುರು ಮಾಡಿದರು. ಅಷ್ಟೇ ಅಲ್ಲದೇ, ಪೊಗರು ಸಿನಿಮಾದಲ್ಲಿ ರಶ್ಮಿಕಾ ನಟಿಸಿದರೂ, ಇನ್‌ಸ್ಟಾಗ್ರಾಮ್‌ನಲ್ಲಿ ಆಕೆ ಪೊಗರು ಸಿನಿಮಾದ ಒಂದು ಪೋಸ್ಟರ್ ಹಾಕಿ ವಿಶ್ ಕೂಡ ಮಾಡಿರಲಿಲ್ಲ. ಪ್ರಮೋಟ್ ಮಾಡುವ ಕೆಲಸಕ್ಕೆ ಹೋಗಲಿಲ್ಲ.
ಅದಾದ ಬಳಿಕ ಕನ್ನಡದಲ್ಲಿ ಯಾವ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿಲ್ಲ. ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ಚಾನ್ಸ್ ಸಿಕ್ಕ ಬಳಿಕ, ರಶ್ಮಿಕಾ ತಾನು ಕನ್ನಡತಿ. ತನ್ನೂರು ಕೊಡಗು, ತನ್ನ ಬೇರು ಇರುವುದು ಸ್ಯಾಂಡಲ್‌ವುಡ್‌ನಲ್ಲಿ ಅನ್ನೋದನ್ನೇ ಮರೆತುಬಿಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ತಾನು ಹೈದರಾಬಾದ್‌ನವಳು ಅಂತಾ ಹೇಳಿಕೊಂಡಿದ್ದಾರೆ. ಆಕೆ ಸದ್ಯ ಮುಂಬೈ ಮತ್ತು ಹೈದರಾಬಾದ್‌ನಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ. ಈ ಕಾರಣಕ್ಕೆ ರಶ್ಮಿಕಾ ತಾನು ಹೈದರಾಬಾದ್‌ನವಳು ಅಂತಾ ಹೇಳಿರಬಹುದು. ಆದರೆ ಕೊಡಗು ತನ್ನೂರು ಅನ್ನೋದನ್ನು ಮರೆತಿದ್ದು, ತೀರಾ ಹೀನಾಯ ಅಂತಾ ಕನ್ನಡಿಗರು ರಶ್ಮಿಕಾಳನ್ನು ಟ್ರೋಲ್ ಮಾಡಿದ್ದಾರೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ನಿನ್ನಂಥವಳನ್ನು ಬೆಳೆಸಿದ್ದು ಕನ್ನಡಿಗರ ತಪ್ಪು. ಬಾಲಿವುಡ್‌ನಲ್ಲಿ ನಟಿಸಿ, ಪ್ರಪಂಂಚದಲ್ಲೇ ಹೆಸರುವಾಸಿಯಾಗಿರುವ ನಟಿಯರಾದ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ ಪಡುಕೋಣೆ, ತಾವು ಕರ್ನಾಟಕದವರು ಅಂತಾ ಹೇಳುತ್ತಾರೆ. ಬಂದಷ್ಟು ಕನ್ನಡ ಮಾತನಾಡಿ, ಹೆಮ್ಮೆ ಪಡುತ್ತಾರೆ. ಅಂಥವರ ನಡುವೆ ರಶ್ಮಿಕಾಳ ದುರಹಂಕಾರ, ಕಾಲ ಧೂಳಿಗೆ ಸಮ ಅಂತಾ ಜನ ಕಾಮೆಂಟ್ ಮಾಡಿದ್ದಾರೆ.