ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್, ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಡಿಜಿಟಲ್ ಬ್ಯಾಂಕಿಂಗ್‍ಗೆ ಒತ್ತು ನೀಡುವ ನಿಟ್ಟಿನಲ್ಲಿ ಆರ್‍ಟಿಜಿಎಸ್ ಮತ್ತು ಎನ್‍ಇಎಫ್‍ಟಿಗೆ ವಿಧಿಸುತ್ತಿದ್ದ ಶುಲ್ಕವನ್ನು ತೆಗೆದು ಹಾಕಿದೆ.
ಈ ಕುರಿತು ಹೊಸ ಅಧಿಸೂಚನೆ ಹೊರಡಿಸಿರೋ ಆರ್ ಬಿಐ, ಆರ್‍ಟಿಜಿಎಸ್ ಅಂದ್ರೆ ರಿಯಲ್ ಟೈಮ್ ಗ್ರಾಸ್ ಸೆಟ್ಲ್‍ಮೆಂಟ್ ಸಿಸ್ಟಮ್ ಮತ್ತು ಎನ್‍ಇಎಫ್‍ಟಿ ಅಂದ್ರೆ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‍ಫರ್‍ಗೆ ಕನಿಷ್ಠ ಶುಲ್ಕ ವಿಧಿಸುತ್ತಿದ್ದೆವು. ಇದನ್ನು ಬ್ಯಾಂಕ್‍ಗಳು ಗ್ರಾಹಕರಿಗೆ ವರ್ಗಾಯಿಸುತ್ತಿದ್ದವು. ಹೀಗಾಗಿ ಡಿಜಿಟಲ್ ಬ್ಯಾಂಕಿಂಗ್‍ಗೆ ಒತ್ತು ನೀಡೋ ಸಲುವಾಗಿ ಆರ್ ಟಿಜಿಎಸ್ ಮತ್ತು ಎನ್‍ಇಎಫ್‍ಟಿಗೆ ವಿಧಿಸುತ್ತಿದ್ದ ಎಲ್ಲ ಶುಲ್ಕವನ್ನು ತೆಗೆದು ಹಾಕುತ್ತಿದ್ದೇವೆ ಅಂತಾ ಹೇಳಿದೆ. ಹೀಗಾಗಿ ಬ್ಯಾಂಕ್‍ಗಳು ಕೂಡಲೇ ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಬೇಕು ಅಂತಾ ಆದೇಶಿಸಿದೆ.
ಈ ಕುರಿತು ಮುಂದಿನ ಒಂದು ವಾರದಲ್ಲಿ ಎಲ್ಲಾ ಬ್ಯಾಂಕ್‍ಗಳಿಗೆ ಸೂಚನೆಗಳನ್ನು ನೀಡಲಾಗುವುದು ಅಂತಾ ಆರ್ ಬಿಐ ಹೇಳಿದೆ. ಇದರ ಜೊತೆಗೆ ಎಟಿಎಂ ಕಾರ್ಡ್ ಮೂಲಕ ಹಣ ಹಿಂಪಡೆಯಲು ವಿಧಿಸುತ್ತಿದ್ದ ಶುಲ್ಕಗಳ ಮರುಪರಿಶೀಲನೆಗೆ ಒಂದು ಸಮಿತಿ ರಚಿಸಿದೆ. ಗ್ರಾಹಕರು ಎಟಿಎಂಗಳನ್ನ ಬಳಸಿ ಹಣ ಹಿಂಪಡೆಯುವುದು ಹೆಚ್ಚಾಗಿದೆ. ಹೀಗಾಗಿ ಎಟಿಎಂ ಕಾರ್ಡ್ ಬಳಸಿ ಹಣ ಹಿಂಪಡೆಯಲು ವಿಧಿಸುತ್ತಿದ್ದ ಶುಲ್ಕ ಮತ್ತು ಇತರ ದರಗಳನ್ನ ಪರಿಷ್ಕರಿಸಿ ಅಥವಾ ಶುಲ್ಕ ಹಿಂಪಡೆಯಿರಿ ಅನ್ನೋ ಒತ್ತಾಯ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಂಕುಗಳ ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನ ರಚಿಸಿರೋದಾಗಿ ಹೇಳಿದೆ. ಈ ಸಮಿತಿ ಮೊದಲ ಸಭೆ ಮುಗಿದ ಎರಡು ತಿಂಗಳ ಒಳಗೆ ವರದಿ ಸಲ್ಲಿಸಲು ಆರ್ ಬಿಐ ನಿರ್ದೇಶನ ನೀಡಿದೆ.
ಕೋಟಿ ಕೋಟಿಗೆ ಅಧಿಪತಿ ಈ ಕನ್ನಡಿಗ ಯಾರು ಗೊತ್ತಾ…??? ಮಿಸ್ ಮಾಡದೇ ಈ ವಿಡಿಯೋ ನೋಡಿ.