ನವದೆಹಲಿ: ಅತೃಪ್ತ ಶಾಸಕರು ಸದನಕ್ಕೆ ಹಾಜರಾಗುವಂತೆ ಒತ್ತಾಯ ಮಾಡುವಂತಿಲ್ಲ ಅನ್ನೋ ಸುಪ್ರೀಂ ತೀರ್ಪಿನ ಬಳಿಕ ಅತೃಪ್ತ ಶಾಸಕರ ನಿಲುವಿಗೆ ಮತ್ತಷ್ಟು ಬಲ ಸಿಕ್ಕಿದೆ. ಯಾವುದೇ ಕಾರಣಕ್ಕೂ ನಾವು ನಾಳೆ ವಿಶ್ವಾಸಮತಕ್ಕೆ ಹಾಜರಾಗೋದಿಲ್ಲ ಅಂತ ದೋಸ್ತಿಗಳಿಗೆ ಸಂದೇಶ ರವಾನಿಸಿದ್ದಾರೆ.
ವಿಪ್ ಉಲ್ಲಂಘನೆ ಕುರಿತು ಇಷ್ಟು ದಿನ ತಲೆಕೆಡಿಸಿಕೊಂಡಿದ್ದ ಅತೃಪ್ತ ಶಾಸಕರು ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇಂದಿನ ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪಿನ ಬಳಿಕ ವಿಡಿಯೋವೊಂದನ್ನು ಬಿಡುಗಡೆ ಮಾಡಿರೋ ಅತೃಪ್ತ ಶಾಸಕರು, ನಾವು ಸರ್ವೋಚ್ಚನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ನಾವೆಲ್ಲಾ ಅತೃಪ್ತ ಶಾಸಕರು ಒಗ್ಗಟ್ಟಾಗಿದ್ದೇವೆ, ಮುಂದೆಯೂ ಸಹ ಒಗ್ಗಟ್ಟಾಗಿರಲಿದ್ದೇವೆ. ಯಾವುದೇ ಕಾರಣಕ್ಕೂ ನಮ್ಮ ನಿರ್ಧಾರದಿಂದ ನಾವು ಹಿಂದೆ ಸರಿಯೋದಿಲ್ಲ ಅಂತ ತಿಳಿಸಿದ್ದಾರೆ. ಸುಮಾರು 20 ಸೆಕೆಂಡ್ ಗಳ ವಿಡಿಯೋದಲ್ಲಿ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಎಲ್ಲಾ ಅತೃಪ್ತ ಶಾಸಕರನ್ನು ಪ್ರತಿನಿಧಿಸಿ ಅವರ ನಿಲುವನ್ನು ಪ್ರತಿಪಾದಿಸಿಕೊಂಡಿದ್ದಾರೆ.
ಇನ್ನು ವಿಡಿಯೋ ಸಂದೇಶ ರವಾನಿಸೋ ಮೂಲಕ ದೋಸ್ತಿಗಳನ್ನು ಧಿಕ್ಕರಿಸಿ ಅವರ ಆತಂಕವನ್ನು ಅತೃಪ್ತರು ದ್ವಿಗುಣಗೊಳಿಸಿದ್ದಾರೆ. ನಾಳೆ ವಿಶ್ವಾಸಮತ ಯಾಚನೆಯಲ್ಲಿ ಮೈತ್ರಿ ಸರ್ಕಾರ ಬಹುತೇಕ ಪತನವಾಗೋದು ಖಚಿತ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದು ಕಾಂಗ್ರೆಸ್- ಜೆಡಿಎಸ್ ನಾಯಕರು ಪ್ರತ್ಯೇಕವಾಗಿ ಚರ್ಚೆಯಲ್ಲಿ ತೊಡಗಿದ್ದಾರೆ.
ಕಡೇ ಆಟಕ್ಕೆ ರೆಡಿಯಾದ ದೋಸ್ತಿಗಳು..!ಮಿಸ್ ಮಾಡದೇ ಈ ವಿಡಿಯೋ ನೋಡಿ