Thursday, November 21, 2024

Latest Posts

Recipe: ಬೇಬಿಕಾರ್ನ್ ಪೆಪ್ಪರ್ ಫ್ರೈ

- Advertisement -

Recipe: ಬೇಕಾಗುವ ಸಾಮಗ್ರಿ:  ಒಂದು ಕಪ್ ಬೇಬಿ ಕಾರ್ನ್, 1 ಸ್ಪೂನ್ ಮೈದಾ, ಕಾರ್ನ್‌ಫ್ಲೋರ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 5 ಎಸಳು ಬೆಳ್ಳುಳ್ಳಿ, 1 ಈರುಳ್ಳಿ, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಸೋಯಾಸಾಸ್, ಅರ್ಧ ಸ್ಪೂನ್ ಪೆಪ್ಪರ್ ಪುಡಿ, 2 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಬೇಬಿಕಾರ್ನ್ ಸಣ್ಣದಾಗಿ ಕತ್ತರಿಸಿ, ಒಂದು ಮಿಕ್ಸಿಂಗ್ ಬೌಲ್‌ಗೆ ಹಾಕಿ. ಇದಕ್ಕೆ ಒಂದು ಸ್ಪೂನ್ ಮೈದಾ, ಕಾರ್ನ್ ಫ್ಲೋರ್, ಅರಿಶಿನ, ಖಾರದ ಪುಡಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಉಪ್ಪು ಹಾಕಿ ಮಿಕ್ಸ್ ಮಾಡಿ. ಹತ್ತು ನಿಮಿಷ ಬಿಟ್ಟು, ಕಾದ ಎಣ್ಣೆಯಲ್ಲಿ ಇದನ್ನು ಕರಿಯಿರಿ.

ಈಗ ಪ್ಯಾನ್ ಬಿಸಿ ಮಾಡಿ, ಎಣ್ಣೆ ಹಾಕಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಕೊಂಚ ಉಪ್ಪು, ಪೆಪ್ಪರ್ ಪುಡಿ, ಸೋಯಾಸಾಸ್ ಹಾಕಿ ಮಿಕ್ಸ್ ಮಾಡಿ. ಬಳಿಕ ಕರಿದ ಬೇಬಿಕಾರ್ನ್ ಕೊತ್ತೊಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಬೇಬಿಕಾರ್ನ್ ಪೆಪ್ಪರ್ ಫ್ರೈ ರೆಡಿ.

- Advertisement -

Latest Posts

Don't Miss