Recipe: ಸಂಜೆ ಹೊತ್ತು ಏನಾದ್ರೂ ಖಾರ ಖಾರವಾಗಿ, ಗರಿ ಗರಿಯಾಗಿರುವ ತಿನಿಸು ತಿನ್ನಬೇಕು ಅಂತಾ ಅನ್ನಿಸಿದರೆ, ಇಂದಿನ ಕಾಲದವರು ಸೀದಾ ಹೊಟೇಲ್‌ಗೆ ಹೋಗುತ್ತಾರೆ. ಬಜ್ಜಿ, ಬೋಂಡಾ, ಚಾಟ್ಸ್ ತಿಂದು ಬರುತ್ತಾರೆ. ಆದರೆ ನೀವು ಈಸಿಯಾಗಿ ಮನೆಯಲ್ಲೇ ತಯಾರಿಸಬಹುದಾದ ಟೀ ಟೈಮ್ ಸ್ನ್ಯಾಕ್ಸ್ ಆಗಿರುವ ಗೋಬಿ ಪಕೋಡಾ ಹೇಗೆ ಮಾಡಬೇಕು ಅಂತಾ ನಾವು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಹೂಕೋಸು, ಅರ್ಧ ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ಮೈದಾ, 4 ಸ್ಪೂನ್ ಕಾರ್ನ್ ಫೋರ್, 1 ಸ್ಪೂನ್ ಖಾರದ ಪುಡಿ, ಗರಮ್ ಮಸಾಲೆ, ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನ ಪೇಸ್ಟ್, ಜೀರಿಗೆ, ಚಾಟ್ ಮಸಾಲೆ, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ನೀವು ಹೂಕೋಸಿಗೆ ಸಂಬಂಧಿಸಿದ ಯಾವುದೇ ರೆಸಿಪಿ ಮಾಡುವ ಮುನ್ನ, ಹೂಕೋಸನ್ನು ಬಿಡಿಸಿ, ಬಿಸಿ ನೀರಿಗೆ ಹಾಕಿ, ಉಪ್ಪು ಹಾಕಿ 10ರಿಂದ 15 ನಿಮಿಷ ನೆನೆಸಿಡಬೇಕು. ಇದರಿಂದ ಗೋಬಿಯಲ್ಲಿರುವ ಹುಳುಗಳು ಬಿಸಿ ನೀರಿಗೆ ಬೀಳುತ್ತದೆ. ಮತ್ತೆ ಅದನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆದು ಬಳಸಬೇಕು.
ಒಂದು ಮಿಕ್ಸಿಂಗ್ ಬೌಲ್‌ಗೆ ಮೈದಾ, ಅಕ್ಕಿ ಹಿಟ್ಟು, ಕಾರ್ನ್ ಫ್ಲೋರ್, ಖಾರದ ಪುಡಿ, ಗರಮ್ ಮಸಾಲೆ, ಚಾಟ್ ಮಸಾಲೆ, ಬೆಳ್ಳುಳ್ಳಿ- ಶುಂಠಿ- ಹಸಿಮೆಣಸಿನ ಪೇಸ್ಟ್, ಉಪ್ಪು, ಜೀರಿಗೆ, ನೀರು ಹಾಕಿ ಮಿಕ್ಸ್ ಮಾಡಿ, ಪಕೋಡಾ ಹಿಟ್ಟು ತಯಾರಿಸಿ. ಈ ಹಿಟ್ಟಿನಲ್ಲಿ ಗೋಬಿ ಹಾಕಿ 15 ನಿಮಿಷ ನೆನೆಸಿಡಿ. ಬಳಿಕ ಎಣ್ಣೆ ಕಾಯಿಸಿ, ಮಂದ ಉರಿಯಲ್ಲಿ ಕರಿದರೆ, ಪಕೋಡಾ ರೆಡಿ. ಟೊಮೆಟೋ ಸಾಸ್, ಕಾಯಿ ಚಟ್ನಿಯೊಂದಿಗೆ ನೀವು ಗೋಬಿ ಸವಿಯಬಹುದು.