Health Tips: ಬೆಳಿಗ್ಗೆ ಎದ್ದ ತಕ್ಷಣ ಹಲವರಿಗೆ ಹಸಿವಾಗುತ್ತದೆ. ಕೊಂಚ ಹೊತ್ತು ಹಸಿವು ತಡೆದುಕೊಂಡು, ಕೆಲವರು ತಿಂಡಿ ತಿನ್ನುತ್ತಾರೆ. ಮತ್ತೆ ಕೆಲವರು ಉಗುರು ಬೆಚ್ಚಗಿನ ನೀರು ಸೇವನೆ ಮಾಡುತ್ತಾರೆ. ಡ್ರೈಫ್ರೂಟ್ಸ್ ಸೇವನೆ ಮಾಡುತ್ತಾರೆ. ಆದರೆ ಇನ್ನು ಕೆಲವರು ಬೆಳಿಗ್ಗೆ ಹೊತ್ತು ಸೇವಿಸಬಾರದ, ಅನಾರೋಗ್ಯಕರ ಆಹಾರವನ್ನೇ ಸೇವಿಸುತ್ತಾರೆ. ಹಾಗಾದ್ರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಏನು ಸೇವನೆ ಮಾಡಬಾರದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಚಹಾ, ಕಾಫಿ: ಬೆಳಿಗ್ಗೆ ಎದ್ದ ತಕ್ಷಣ ಹಲವರು ಕಾಫಿ, ಟೀ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಇಂಥ ಅಭ್ಯಾಸ ಇರುವವರಿಗೆ ಭವಿಷ್ಯದಲ್ಲಿ ಹೊಟ್ಟೆ ಉಬ್ಬರ, ಹೊಟ್ಟೆ ನೋವಿನ ಸಮಸ್ಯೆ, ಆಜೀರ್ಣ ಸಮಸ್ಯೆ ಬರೋದು ಗ್ಯಾರಂಟಿ. ಏಕೆಂದರೆ, ಖಾಲಿ ಹೊಟ್ಟೆಯಲ್ಲಿ ಚಹಾ, ಕಾಫಿ ಕುಡಿಯುವುದರಿಂದ ಪಿತ್ತ ಹೆಚ್ಚಾಗುತ್ತದೆ. ಪಿತ್ತದ ಪರಿಣಾಮವಾಗಿಯೇ ಹೊಟ್ಟೆ ಸಮಸ್ಯೆ ಹುಟ್ಟಿಕೊಳ್ಳುತ್ತದೆ.
ಕೆಲವರು ಪುಟ್ಟ ಮಕ್ಕಳಿಗೂ ಸಹ, ಬೆಳಿಗ್ಗೆ ಎದ್ದ ತಕ್ಷಣ ಚಹಾ, ಬಿಸ್ಕೀಟ್ ತಿನ್ನಲು ಕೊಟ್ಟು ಅಭ್ಯಾಸ ಮಾಡಿರುತ್ತಾರೆ. ಇದು ಕೆಟ್ಟ ಅಭ್ಯಾಸ. ನೀವು ಮಕ್ಕಳಿಗೆ ಚಹಾ ಕುಡಿಸುವುದನ್ನು ಅಭ್ಯಾಸ ಮಾಡಲೇಬಾರದು. ಹಾಲು ಕುಡಿಯುವ ಅಭ್ಯಾಸ ಮಾಡಿಸಿ. ಚಹಾ ಕಾಫಿ ಸೇವನೆಯಿಂದ ಮಕ್ಕಳ ದೇಹದ ಶಕ್ತಿ ಕಳೆದು ಹೋಗುತ್ತದೆ. ಕಾಲೇಜು ಮೆಟ್ಟಿಲೇರುವವರೆಗೂ ಹಾಲು, ಜ್ಯೂಸ್, ಎಳನೀರು, ಮೊಸರು, ಮಜ್ಜಿಗೆ ಕೊಟ್ಟರೆ ಸಾಕು.
ಸಿಟ್ರಸ್ ಫ್ರೂಟ್ಸ್: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಆರೇಂಜ್, ಮೂಸಂಬಿ, ಟೊಮೆಟೋ, ದ್ರಾಕ್ಷಿಯಂಥ ಹುಳಿ ಹಣ್ಣುಗಳ ಸೇವನೆ ಮಾಡಬಾರದು ಅಂತಾ ಹೇಳಲಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಬರಬಹುದು. ಹಾಗಾಗಿ ಇಂಥ ಹಣ್ಣುಗಳನ್ನು ಹೊಟ್ಟೆ ತುಂಬಿದ ಬಳಿಕ, ಅಂದ್ರೆ ತಿಂಡಿ, ಊಟವಾದ ಬಳಿಕ ಸೇವಿಸಿ.
ಜಂಕ್ ಫುಡ್: ವಿದೇಶಿಗರ ರೀತಿ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದು ಹಲವರು ಶೋಕಿಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್, ಬಟರ್, ಜಾಮ್ ಸೇವನೆ ಮಾಡುತ್ತಾರೆ. ವಿದೇಶದ ವಾತಾವರಣಕ್ಕೆ ಆ ಆಹಾರ ಹೊಂದಿಕೊಳ್ಳಬಹುದೇನೋ, ಆದರೆ ಇಲ್ಲಿನ ವಾತಾವರಣಕ್ಕೆ ಅಂಥ ಆಹಾರ ಹೊಂದುವುದಿಲ್ಲ. ಹಾಗಾಗಿ ಅಪರೂಪಕ್ಕೆ, ಅದರಲ್ಲೂ ಸಂಜೆ ಹೊತ್ತಿಗೆ ಬ್ರೆಡ್ ಸೇವನೆ ಮಾಡಬಹುದು. ಬೆಳಿಗ್ಗೆ ಇಂಥ ಆಹಾರ ಸೇವಿಸುವುದರಿಂದ, ಆರೋಗ್ಯ ಹಾಳಾಗುತ್ತದೆ.
ಬೊಜ್ಜು, ಅಜೀರ್ಣ, ಹೊಟ್ಟೆ ಉಬ್ಬರ ಸೇರಿ ಹಲವು ಆರೋಗ್ಯ ಸಮಸ್ಯೆ ಬಬರುವ ಎಲ್ಲಾ ಸಾಧ್ಯತೆಗಳಿರುತ್ತದೆ. ಹಾಗಾಗಿ ಜಂಕ್ ಫುಡ್, ಬೇಕರಿ ತಿಂಡಿ, ಕರಿದ ತಿನಿಸು, ಟೀ, ಕಾಫಿ, ಸಿಟ್ರಸ್ ಹಣ್ಣುಗಳ ಸೇವನೆ ಮಾಡಬೇಡಿ.




