Saturday, July 12, 2025

Latest Posts

Recipe: ಕೋರಿಯನ್ ಶೈಲಿಯ ತರಕಾರಿ ಪ್ಯಾನ್ ಕೇಕ್ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ: 1ಕ್ಯಾಪ್ಸಿಕಂ, 1 ಕ್ಯಾರೇಟ್, 1 ಈರುಳ್ಳಿ, ಕಾಲು ಕಪ್ ಮೈದಾ, ಕಾಾಲು ಕಪ್ ಕಡಲೆ ಹಿಟ್ಟು, 1 ಸ್ಪೂನ್ ಕಾರ್ನ್‌ಫ್ಲೋರ್, ಉಪ್ಪು, ಖಾರದ ಪುಡಿ, ತುಪ್ಪ ಅಥವಾ ಎಣ್ಣೆ.

ಮಾಡುವ ವಿಧಾನ: 1 ಬೌಲ್‌ಗೆ ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೇಟ್, ಮೈದಾ, ಕಡಲೆ ಹಿಟ್ಟು, ಉಪ್ಪು, ಖಾರದ ಪುಡಿ ಅಥವಾ ಹಸಿಮೆಣಸಿನ ಪೇಸ್ಟ್, ನೀರು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ನೀರಿನಲ್ಲಿ ಮಿಕ್ಸ್ ಮಾಡಿದ ಕಾರ್ನ್‌ಫ್ಲೋರ್ ಪುಡಿ ಹಾಕಿ ಮಿಕ್ಸ್ ಮಾಡಿ, ಬಜ್ಜಿ ಹಿಟ್ಟಿನ ಹದಕ್ಕಿರಲಿ.

ಈಗ ಪ್ಯಾನ್ ಬಿಸಿ ಮಾಡಿ ಎಣ್ಣೆ ಅಥವಾ ತುಪ್ಪ ಸವರಿ, ಪ್ಯಾನ್ ಕೇಕ್ ಅಷ್ಟು ದಪ್ಪವಾಗಿ ದೋಸೆ ಮಾಡಿದರೆ, ಕೋರಿಯನ್ ಶೈಲಿಯ ತರಕಾರಿ ಪ್ಯಾನ್ ಕೇಕ್ ರೆಡಿ. ಇದನ್ನು ಸೋಯಾಸಾಸ್ ಜತೆ ಸವಿಯಿರಿ.

- Advertisement -

Latest Posts

Don't Miss