Recipe: ಹೈ ಪ್ರೋಟಿನ್ ವೆಜ್ ಸಲಾಡ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಬೌಲ್ ಸೋಯಾ ಚಂಕ್ಸ್, ಕ್ಯಾರೇಟ್, ಟೋಮೆಟೋ, ಈರುಳ್ಳಿ, ಬಟರ್ ಫ್ರೂಟ್, ಸೌತೇಕಾಯಿ, ಅರ್ಧ ಸ್ಪೂನ್ ಎಣ್ಣೆ, ಕೊತ್ತೊಂಬರಿ ಸೊಪ್ಪು, ಯೋಗರ್ಟ್, ಜೀರಿಗೆ ಪುಡಿ, ಸ್ವಲ್ಪ ಉಪ್ಪು, ನಿಂಬೆರಸ.

ಮಾಡುವ ವಿಧಾನ: ನೀರು ಬಿಸಿ ಮಾಡಿ, ಕುದಿ ಬರಿಸಿ, ಅದಕ್ಕೆ ಸ್ವಲ್ಪ ಉಪ್ಪು ಮತ್ತು ಸೋಯಾ ಚಂಕ್ಸ್ ಹಾಕಿ ಬಳಿಕ ಗ್ಯಾಸ್ ಆಫ್ ಮಾಡಿ. ಸ್ವಲ್ಪ ಸಮಯ ಹಾಗೇ ಇರಿಸಿ, ನೀರು ಬಸಿದು, ಸೋಯಾ ಚಂಕ್ಸ್ ಹಿಂಡಿ, ಅದನ್ನು ಪ್ಯಾನ್‌ಗೆ ಹಾಕಿ, ಅರ್ಧ ಸ್ಪೂನ್ ಎಣ್ಣೆ ಹಾಕಿ, ಲೈಟ್ ಆಗಿ ಫ್ರೈ ಮಾಡಿ. ಗ್ಯಾಸ್ ಆಫ್ ಮಾಡಿ, ತಣಿಸಿ, ಮಿಕ್ಸಿಂಗ್‌ ಬೌಲ್‌ಗೆ ಹಾಕಿ, ಇದಕ್ಕೆ ಸೌತೇಕಾಯಿ, ಟೋಮೆಟೋ, ಕ್ಯಾರೆಟ್, ಈರುಳ್ಳಿ, ಪುದೀನಾ, ಬಟರ್ ಫ್ರೂಟ್, ಕೊತ್ತೊಂಬರಿ ಸೊಪ್ಪು, ಹಾಕಿ ಮಿಕ್ಸ್ ಮಾಡಿ.

ನಂತರ ಸ್ವಲ್ಪ ಬಟರ್ ಫ್ರೂಟ್, ಯೋಗರ್ಟ್, ಜೀರಿಗೆ ಪುಡಿ, ಸ್ವಲ್ಪ ಉಪ್ಪು, ನಿಂಬೆರಸ ಹಾಕಿ ಗ್ರೈಂಡ್ ಮಾಡಿ ಪೇಸ್ಟ್ ತಯಾರಿಸಿ. ಸಲಾಡ್‌ಗೆ ಇದನ್ನು ಹಾಕಿ ಮಿಕ್ಸ್ ಮಾಡಿದ್ರೆ, ಹೈ ಪ್ರೋಟಿನ್ ವೆಜ್ ಸಲಾಡ್ ರೆಡಿ.

About The Author