ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಎಂದರೆ ಅದು ಪುಷ್ಪ. ಈ ಸಿನಿಮಾ ಹೆಸರಿನಿಂದಲೇ ಬಾರಿ ಸುದ್ದಿಯಾಗಿತ್ತು. ಈ ಸಿನಿಮಾವನ್ನು ಸುಕುಮಾರ್ ಅವರು ನಿರ್ದೇಶನ ಮಾಡಿದ್ದು, ಮ್ಯೂಸಿಕ್ ದೇವಿ ಶ್ರೀ ಪ್ರಸಾದ್ ರವರು ನೀಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು, ಕನ್ನಡ, ತಮಿಳು, ಮಳೆಯಾಳಂ, ಹಿಂದಿ ಭಾಷೆಗಳಲ್ಲಿ ಮೂಡಿಬಂದಿದೆ. ಈ ಸಿನಿಮಾದಲ್ಲಿ ತಮಿಳಿನ ಫಹಾದ್ ಫಾಸಿಲ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅದೇ ರೀತಿ ನಮ್ಮ ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ನಿನ್ನೆ ರಾತ್ರಿ ಈ ಸಿನಿಮಾದ ಅಫಿಶಿಯಲ್ ಟ್ರೈಲರ್ ರಿಲೀಸ್ ಆಗಿದ್ದು ಲೋಕೇಶನ್ಸ್, ಡೈಲಾಗ್ಸ್, ಸೌಂಡ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದೆ. ಇನ್ನು ಅಲ್ಲು ಅರ್ಜುನ್ ರವರು ಇದೇ ಮೊದಲ ಬಾರಿಗೆ ಇಂತಹ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ನಿದ್ದೆಗೆಡುವಂತೆ ಮಾಡಿದೆ. ಇನ್ನು ಈ ಸಿನಿಮಾದ ಸಾಂಗ್ಸ್ ಎಲ್ಲವೂ ಸಹ ಭಾರಿ ಸದ್ದು ಮಾಡುತ್ತಿದೆ, ಎಲ್ಲಿ ನೋಡಿದರೂ ಸಹ ಏ ಬಿಡ್ಡ ಇದಿ ನಾ ಅಡ್ಡ, ತಗ್ಗೆದೆ ಲೇ ಎಂಬ ಡೈಲಾಗ್ಸ್ ಎಲ್ಲರ ಬಾಯಲ್ಲಿ ಗುನುಗುತ್ತಿದೆ. ಇನ್ನು ಟ್ರೈಲರ್ ನಲ್ಲಿ ಪುಷ್ಪ ಎಂದರೆ ಹೂ ಅಲ್ಲ, ಬೆಂಕಿ ಎಂದು ಹೇಳಿರುವುದು , ಸಿನಿಮಾ ಬೆಂಕಿಯ ಗಾಳಿಯನ್ನು ಸೃಷ್ಟಿಸಿ ಸಿನಿಮಾ ಬ್ಲಾಕ್ ಬಾಸ್ಟರ್ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಬಹುದು. ಇನ್ನು ಸಿನಿಪ್ರೇಕ್ಷಕರಿಗೆ ಈ ಸಿನಿಮಾ ಮೃಷ್ಟಾನ್ನ ಭೋಜನ ಎಂದು ಹೇಳಬಹುದು. ಇನ್ನು ಅಭಿಮಾನಿಗಳು ವೈಟಿಂಗ್, ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿದ್ದು, ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾ ಡಿಸೆಂಬರ್ 17 ನೇ ತಾರೀಕು ಬಿಡುಗಡೆಯಾಗಲಿದ್ದು ಭಾರತದ ಸಿನಿಮಾ ರಂಗದಲ್ಲಿ ಬೆಂಕಿಯಂತೆ ಪ್ರಜ್ವಲಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದುಹೇಳಬಹುದಾಗಿದೆ.