Health Tips: ಮುಖದಲ್ಲಿ ಒಂಚೂರು ಸುಕ್ಕು ಇರಬಾರದು. ಮುಖ ಸಾಫ್ಟ್ ಆಗಿರಬೇಕು, ಕ್ಲೀನ್ ಆಗಿರಬೇಕು. ನಾಲ್ಕು ಜನರ ಮಧ್ಯೆ ತಾನು ಎದ್ದು ಕಾಣಬೇಕು ಅಂತಾ ಯಾರಿಗೆ ತಾನೇ ಇಷ್ಟವಿರೋದಿಲ್ಲಾ ಹೇಳಿ. ಹಾಗಾಗಿ ನಾವಿಂದು ರಿಂಕಲ್ ಫ್ರೀ ತ್ವಚೆಯನ್ನು ಪಡೆಯೋದು ಹೇಗೆ ಅಂತಾ ಹೇಳಲಿದ್ದೇವೆ.
2ರಿಂದ 3 ಸ್ಪೂನ್ ಅಕ್ಕಿಹಿಟ್ಟು, ಒಂದು ಕೋಳಿ ಮೊಟ್ಟೆ, ಕೊಂಚ ಶ್ರೀಗಂಧದ ಪೇಸ್ಟ್, ಅರಿಶಿನ ಮಿಕ್ಸ್ ಮಾಡಿ, ಮೊದಲು ಕೈಗೆ ಹಚ್ಚಿ, ನಿಮ್ಮ ಸ್ಕಿನ್‌ಗೆ ಈ ಪೇಸ್ಟ್ ಒಗ್ಗುತ್ತದೆ ಎಂದಾದಲ್ಲಿ ಈ ಫೇಸ್‌ಪ್ಯಾಕ್ ಮುಖಕ್ಕೆ ಹಚ್ಚಿ. ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಈ ಫೇಸ್‌ಪ್ಯಾಕ್ ಹಚ್ಚುವುದರಿಂದ, ನೀವು ಯಂಗ್ ಆಗಿ ಕಾಣುತ್ತೀರಿ. ಮುಖದ ಮೇಲಿನ ರಿಂಕಲ್ಸ್ ಕಡಿಮೆಯಾಗುತ್ತದೆ.
ಈ ಫೇಸ್‌ಪ್ಯಾಕ್ ಬಳಸುವಾಗ, ನೀವು ನೀರಿನ ಬದಲು ರೋಸ್ ವಾಟರ್ ಮಿಕ್ಸ್ ಮಾಡಬೇಕು. ಈ ಫೇಸ್‌ಪ್ಯಾಕ್ ಹಾಕಿ, 2 ಗಂಟೆ ಬಿಟ್ಟು ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಮುಖದಲ್ಲಿ ಗ್ಲೋ ಬರುತ್ತದೆ. ನಿಮ್ಮ ಮುಖ ಸೌಂದರ್ಯಯುತವಾಗಿ, ರಿಂಕಲ್ ಫ್ರೀಯಾಗಿ ಕಾಣುತ್ತದೆ. ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. ಪೂರ್ತಿ ವಿವರಣೆಗಾಗಿ ವೀಡಿಯೋ ನೋಡಿ.

