Saturday, July 5, 2025

Latest Posts

ಕನ್ನಡಿಯಿಂದ ಬ್ಯಾಂಗ್ಲೋರ್ ತೆಗೆದು ಹಾಕಿ ಅರ್ಥಾ ಆಯ್ತಾ ಅಂದ ರಶ್ಮಿಕಾ..

- Advertisement -

Sports News: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ. ಇದಕ್ಕಾಗಿ ಎಲ್ಲ ತಂಡದವರು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಬ್ಯಾಕು ಟೂ ಬ್ಯಾಕ್ ಪ್ರೋಮೋ ಬಿಡುಗಡೆ ಮಾಡಿ, ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಅಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾ ಅರ್ಥ ಮಾಡಿಸೋಕ್ಕೆ ಟ್ರೈ ಮಾಡ್ತಾನೇ ಇದ್ದಾರೆ.

ಮೊದಲು ರಿಷಬ್ ಶೆಟ್ಟಿ, ಬಳಿಕ ಶಿವಣ್ಣ, ಆಮೇಲೆ ಸುದೀಪ್ ಹೀಗೆ ಹಲವರು ಬಂದು ಬ್ಯಾಂಗ್ಲೋರ್ ಬೇಡಾ ಅಂತಾ ಹೇಳಿದ್ದಾಯಿತು. ಇದೀಗ, ರಶ್ಮಿಕಾ ಮಾಂದಣ್ಣ ಕೂಡ ಇದೇ ಪ್ರೋಮೋದಲ್ಲಿ ಆ್ಯಕ್ಟ್ ಮಾಡಿದ್ದು, ಮಿರರ್‌ ಮೇಲಿದ್ದ ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್‌ನಲ್ಲಿ ಬ್ಯಾಂಗ್ಲೋರ್‌ನ ಅಳಿಸಿ ಹಾಕಿದ್ದಾರೆ. ಈ ಮೂಲಕ ರಶ್ಮಿಕಾ ಬ್ಯಾಂಗ್ಲೋರ್ ಬೇಡಾ ಅಂತಾ ಹೇಳಿದ್ದಾರೆ.

ಆದರೆ ಕಾಮೆಂಟ್ ಸೆಕ್ಷನ್‌ನಲ್ಲಿ ಮಾತ್ರ ರಶ್ಮಿಕಾ ವಿರುದ್ಧ ಕಾಮೆಂಟ್ಸ್‌ಗಳ ಮಹಾಪೂರವೇ ಹರಿದು ಬಂದಿದೆ. ಈ ನಟಿ ಬಿಟ್ಟು ಬೇರೆ ಯಾವ ನಟಿಯೂ ನಿಮಗೆ ಸಿಗಲಿಲ್ವಾ..? ಕನ್ನಡವೇ ಬೇಡ ಅಂದವಳಿಗೆ ಈ ಪ್ರೋಮೋದಲ್ಲಿ ಅವಕಾಶ ಕೊಡುವ ಅವಶ್ಯಕತೆ ಏನಿತ್ತು..? ಯಾವ ನಟಿಯನ್ನಾದರೂ ಹಾಕಿ, ಇವಳನ್ನು ಮೊದಲು ತೆಗೆದು ಹಾಕಿ ಅಂತಲೇ ಹಲವರು ಹೇಳಿದ್ದಾರೆ.

ಮತ್ತೆ ರಷ್ಯಾ ಅಧ್ಯಕ್ಷರಾಗಿ ಆಯ್ಕೆಯಾದ ಪುಟಿನ್: ಇನ್ನು 6 ವರ್ಷ ವ್ಲಾದಿಮೀರ್ ಪಟ್ಟ ಗಟ್ಟಿ..

ಖ್ಯಾತ ಗಾಯಕಿ ಮಂಗ್ಲಿ ಕಾರು ಅಪಘಾತ

ಟ್ರೋಫಿ ಗೆದ್ದ WPL ಚಾಂಪಿಯನ್ಸ್‌ಗೆ ವಿಶ್ ಮಾಡಿದ ರಾಜಕೀಯ ಗಣ್ಯರು..

- Advertisement -

Latest Posts

Don't Miss