ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura) ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣ(Bhagat Singh Stadium)ದಲ್ಲಿ 73ನೇ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ದಿಡೀರನೆ ವೇದಿಕೆಯ ಮುಂದೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಚಂದ್ರು(chandru) ಇವರು ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯ ಮುಂಭಾಗದಲ್ಲಿ ನಿಂತು ಶಾಸಕ ಟಿ.ವೆಂಕಟರಮಣಯ್ಯನವರ ಮುಂದೆ MSGP ತ್ಯಾಜ್ಯದ ಘಟಕವನ್ನು ಕೂಡಲೇ ಮುಚ್ಚಬೇಕು. ಎಮ್ಮೆದಪ್ಪ ಚರ್ಮದ ಸರ್ಕಾರ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕೆ ದಿಕ್ಕಾರವನ್ನು ಕೂಗಿ ನಾನು ಒಬ್ಬನೇ ಬಂದಿದ್ದೇನೆ ಒಬ್ಬನೇ ಪ್ರತಿಭಟನೆ ಮಾಡುತ್ತೀದ್ದೇನೆ ಸರ್ಕಾರದ ನಿಯಮವನ್ನು ಪಾಲಿಸಿ ಒಬ್ಬನೇ ಪ್ರತಿಭಟನೆ ಮಾಡುತ್ತಿದ್ದೇನೆ ಎಂದು ಕರ್ನಾಟಕ. ರಕ್ಷಣವೇದಿಕೆ ಕನ್ನಡಿಗರ ಬಣದ ಸಂಸ್ಥಾಪಕ ಅಧ್ಯಕ್ಷ ಚಂದ್ರು ಸರ್ಕಾರದ ವಿರುದ್ದ ಘೋಷಣೆ ಕೂಗಿದ ಸಂದರ್ಭದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಕುಮಾರ್ ಚಂದ್ರು ಇವರನ್ನು ಸಮಾದಾನ ಮಾಡಿ ಕಳುಹಿಸಲು ಪ್ರಯತ್ನ ಮಾಡಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿ ವೆಂಕಟರಮಣಯ್ಯ(T.Venkataramanaiah) ಕನ್ನಡ ಸಂಘಟನೆಯ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು ತಪ್ಪಲ್ಲ ಎಮ್ಮೆ ಚರ್ಮದ ಸರ್ಕಾರ ಯೋಜನೆಗಳು ಕಾರ್ಯಕ್ರಮಗಳೆಲ್ಲವೂ ನಷಿಸಿಹೋಗಿದೆ ಎಂದು ಸರ್ಕಾರಸ ವಿರುದ್ಧ ಶಾಸಕ ಟಿ ವೆಂಕಟರಮಣಯ್ಯ ಗುಡುಗಿದರು.
ಅಭಿಜಿತ್ ,ಕರ್ನಾಟಕ ಟಿವಿ, ದೊಡ್ಡಬಳ್ಳಾಪುರ.