Wednesday, December 11, 2024

Latest Posts

Bihar ರೈಲ್ವೆ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ಪ್ರತಿಭಟನಾಕಾರರು ರೈಲಿಗೆ ಬೆಂಕಿ..!

- Advertisement -

ಬಿಹಾರದಲ್ಲಿ ತಾಂತ್ರಿಕೇತರ ವರ್ಗಗಳ ರೈಲ್ವೆ ನೇಮಕಾತಿ ಮಂಡಳಿಯ 2-ಹಂತದ ಪರೀಕ್ಷೆಯಲ್ಲಿನ ಅಕ್ರಮ ಖಂಡಿಸಿ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇನ್ನು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ರೈಲ್ವೆ ಸಚಿವ  ಅಶ್ವಿನಿ ವೈಷ್ಣವ್  ವಿದ್ಯಾರ್ಥಿಗಳು ಶಾಂತಿ ನೀತಿಯಲ್ಲಿ ವರ್ತಿಸುವಂತೆ  ಮನವಿಯನ್ನು ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಳ್ಳಬೇಡಿ, ರೈಲ್ವೆ ನಿಮ್ಮ ಆಸ್ತಿ ದಯವಿಟ್ಟು ಅದನ್ನು ನಾಶ ಪಡಿಸಬೇಡಿ, ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ, ಪರೀಕ್ಷೆ ಫಲಿತಾಂಶ ಪಾರದರ್ಶಕವಾಗಿರುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Railway Minister AshwiniVaishnaw) ಹೇಳಿದ್ದಾರೆ. ಇನ್ನು ಬಿಹಾರದ ಗಯಾ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರ ಗುಂಪೊಂದು ಕಲ್ಲು ತೂರಾಟ ನಡೆಸಿ ರೈಲಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಸಚಿವರ ಈ ಹೇಳಿಕೆ ನೀಡಿದ್ದು, ವಿವಿಧ ರೈಲ್ವೆ ನೇಮಕಾತಿ ಮಂಡಳಿಗಳ ಅಡಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಮತ್ತು ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸಲು ಸಚಿವಾಲಯ ಸಮಿತಿಯೊಂದನ್ನು ರಚಿಸಿದೆ. ಸಮಿತಿಯು ಮಾರ್ಚ್ 4 ರೊಳಗೆ ರೈಲ್ವೆ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನಾಕಾರರು ಆರಂಭದಲ್ಲಿ ರೈಲಿಗೆ ಕಲ್ಲು ತೂರಾಟ ನಡೆಸಿ ನಂತರ ಕೋಚ್ಗೆ ಬೆಂಕಿ ಹಚ್ಚಿದರು ಎಂದು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಎಸ್ಪಿ) ಆದಿತ್ಯ ಕುಮಾರ್ ಅವರು ಹೇಳಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಹೊತ್ತಿ ಉರಿಯುತ್ತಿದ್ದ ರೈಲಿನ ಬೋಗಿಗಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.  CBT-2 ಪರೀಕ್ಷೆಯ ದಿನಾಂಕವನ್ನು ಸೂಚಿಸಲಾಗಿಲ್ಲ ಮತ್ತು ಇಲ್ಲಿಯವರೆಗೆ 2019 ರಲ್ಲಿ ರೈಲ್ವೆ ಪರೀಕ್ಷೆಯ ಕುರಿತು ಯಾವುದೇ ನವೀಕರಣವನ್ನು ಸೂಚಿಸಲಾಗಿಲ್ಲ. ಫಲಿತಾಂಶಕ್ಕಾಗಿ ಇನ್ನೂ ಕಾಯಲಾಗುತ್ತಿದೆ. ಸಿಬಿಟಿ 2 ಪರೀಕ್ಷೆ ರದ್ದುಪಡಿಸಿ ಫಲಿತಾಂಶ ಬಿಡುಗಡೆಗೆ ಆಗ್ರಹಿಸುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

- Advertisement -

Latest Posts

Don't Miss