Sunday, September 8, 2024

Latest Posts

‘ಹಾಸನದಲ್ಲಿ ಪೊಲೀಸರಿಗಿಂತ ಡಿವೈಎಸ್ಪಿ ಮತ್ತು ರೌಡಿಗಳ ಆಡಳಿತ ನಡೆಯುತ್ತಿದೆ’

- Advertisement -

ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲಾ ಠಾಣೆಗಳು ರೌಡಿಗಳ ನಿಯಂತ್ರಣದಲ್ಲಿದ್ದು, ಇದಕ್ಕೆ ಡಿವೈಎಸ್ಪಿ, ಕುಮ್ಮಕ್ಕು ನೀಡುತ್ತಿದ್ದು, ತಕ್ಷಣವೇ ಅವರನ್ನು ವರ್ಗಾವಣೆ ಮಾಡಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ  ಹೆಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಅವ್ಯವಸ್ಥೆಗಳಾಗಿದ್ದು, ಡಿವೈಎಸ್ಪಿ, ಪೆನ್‌ಷನ್ ಮೊಹಲ್ಲಾ ಹಾಗೂ ಗ್ರಾಮಾಂತರ ಠಾಣೆಗಳನ್ನು ರೌಡಿಗಳೇ ನಿಯಂತ್ರಣ ಮಾಡುತ್ತಿದ್ದು, ಇದರ ಬಗ್ಗೆ ಗೃಹ ಸಚಿವರು ಮತ್ತು  ಪೊಲೀಸ್ ಮಹಾ ನಿರ್ದೆಶಕರಿಗೆ ಪತ್ರ ಬರೆಯಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಮಾ.27ರಂದು  ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ  ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆಲ ತಿಂಗಳ ಹಿಂದೆ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆಗೆ ಡಿವೈಎಸ್ಪಿ ಪ್ರಮುಖ ಕಾರಣಕರ್ತ, ಅಲ್ಲದೆ ಆರೋಪಿಗಳನ್ನು ಬಿಡಿಸುವಲ್ಲಿಯೂ ಸಂಪೂರ್ಣವಾಗಿ ಸಹಕರಿಸುತ್ತಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ಎಫ್‌ಐಆರ್ ಅನ್ನು  ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಮೊನ್ನೆ ರಾತ್ರಿ ದೊಡ್ಡಪುರ ಗ್ರಾಮಕ್ಕೆ ನಾನು ಹೋಗಿದ್ದೆ ಎಂಬ ಕಾರಣಕ್ಕಾಗಿ ಜೆಡಿಎಸ್‌ನವರ ಫ್ಲೆಕ್ಸ್‌ಗಳನ್ನು ಹಾಸನ ನಗರಸಭೆಯ ಟ್ರ್ಯಾಕ್ಟರ್ ಮೂಲಕ ತೆರವುಗೊಳಿಸಿದ್ದಾರೆ. ಆದರೆ ಉಳಿದ ಪಕ್ಷಗಳ ಬ್ಯಾನರ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಮ್ಮ ಕಾರ‍್ಯಕರ್ತರ ಮೇಲೆ  ಪೊಲೀಸರು ಹಲ್ಲೆ   ಮಾಡಿದ್ದಾರೆ ಎಂದು ದೂರಿದರು.

ಹಾಸನ ಜಿಲ್ಲೆಯಲ್ಲಿ  ಪೊಲೀಸ್ ವರಿಷ್ಠಾಧಿಕಾರಿಗಳ ಆಡಳಿತ ನಡೆಯುತ್ತಿಲ್ಲ. ಡಿವೈಎಸ್ಪಿ ಮತ್ತು ರೌಡಿಗಳು ಆಡಳಿತ ಮಾಡುತ್ತಿದ್ದಾರೆ. ನಮ್ಮ ಕಾರ‍್ಯಕರ್ತರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಿ ರೌಡಿ ಶೀಟರ್ ಪಟ್ಟ ಕಟ್ಟಲಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ಕೆಟ್ಟ ವ್ಯವಸ್ಥೆಯನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿರಲಿಲ್ಲ. ಚುನಾವಣೆಯು ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗಕ್ಕೂ ಪತ್ರ ಬರೆದು  ಪೊಲೀಸ್ ಇಲಾಖೆಯಲ್ಲಿ ಇರುವ ಕೆಲವರನ್ನು ಎತ್ತಂಗಡಿ ಮಾಡಿಸಬೇಕು ಎಂದು ಆಗ್ರಹಿಸಿದರು.

ಕಳೆದ ಮೂರು ವರ್ಷಗಳಲ್ಲಿ ನಮ್ಮ ಜೆಡಿಎಸ್ ಪಕ್ಷದ ಕಾರ‍್ಯಕರ್ತರು ಮತ್ತು ಮುಖಂಡರ ಮೇಲೆ  200ಕ್ಕೂ ಹೆಚ್ಚು ಪ್ರಕರಣಗಳನ್ನು ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತ ನಡೆದರೆ  ಅದಕ್ಕೆ ಜಿಲ್ಲಾ   ಪೊಲೀಸ್ ಇಲಾಖೆಯೇ ಪ್ರಮುಖ ಕಾರಣವಾಗುತ್ತದೆ ಎಂದರು. ಹಾಸನದಲ್ಲಿ  ಕಾಂಕ್ರೀಟ್ ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಧೂಳುಗಳು ಏಳಲಾರಂಭಿಸಿದೆ. ಕಮೀಷನ್ ಆಸೆಗಾಗಿ ಈ ರೀತಿ ಕಳಪೆ ಕಾಮಗಾರಿಗಳನ್ನು ಮಾಡಲಾಗಿದೆ. ನಗರಸಭೆ ಆಯುಕ್ತರು ಮತ್ತು ಯೋಜನಾ ಇಲಾಖೆಗೆ ಬಂದಿರುವ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಿಡಿಕಾರಿದರು.

ನಗರಸಭೆ ಆಯುಕ್ತರು ಇನ್ನೆರಡು ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದೇನೆ. ಇದ್ದಷ್ಟು ದಿನ ಎಲ್ಲವನ್ನೂ ದೋಚಿಕೊಂಡು ಹೋಗೋಣ ಎಂದು ಮುಂದಾಗಿದ್ದಾರೆ. ಅದೇ ರೀತಿ ಯೋಜನಾ ಇಲಾಖೆಗೆ ಬಂದಿರುವ ಈ ಹಿಂದೆ ಹಾಸನದ ಎಸಿಯಾಗಿ ಕರ್ತವ್ಯ ನಿರ್ವಹಿಸಿರುವ ಸಂದರ್ಭದಲ್ಲಿ  ಹೇಮಾವತಿ ಜಲಾಶಯದ ನಿರಾಶಿತ್ರರಿಗೆ ಭೂಮಿ ಹಂಚಿಕೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಆತನ ಬಂಡವಾಳ ಬಯಲಿಗೆಳೆಯುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಲೋಕಾಯುಕ್ತ ಇಲಾಖೆ ಸರ್ಕಾರದ ಕಪಿಮುಷ್ಠಿಯಲ್ಲಿದೆ. ಜಿಲ್ಲೆಯಲ್ಲೂ ಕೂಡ ಲೋಕಾಯುಕ್ತ ನಿಷ್ಕ್ರಿಯಗೊಂಡಿದೆ. ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ,  ಜಿಎಸ್‌ಟಿ ಅಧಿಕಾರಿಗಳು, ಪಿಡಬ್ಲ್ಯುಡಿ,  ರಸ್ತೆ ನಿರ್ವಹಣೆ ಅಧಿಕಾರಿಗಳು ಕೋಟಿಗಟ್ಟಳೆ  ಆಸ್ತಿ ಗಳಿಸಿದ್ದು, ಮನೆ ಮೇಲೆ ದಾಳಿ ಮಾಡಿದರೆ ಎಲ್ಲಾ ಸತ್ಯಾಂಶ ಹೊರ ಬರಲಿದೆ ಎಂದರು.

ಹಾಸನದಲ್ಲಿರುವ ಡಿವೈಎಸ್ಪಿ ಸೆಟ್ಲ್‌ಮೆಂಟ್ ಗಿರಾಕಿ, ಎಲ್ಲಾ ಪ್ರಕರಣಗಳನ್ನು ಕೋರ್ಟ್ ಕಚೇರಿಗೆ ಕಳುಹಿಸದೆ ತನ್ನ ಕಚೇರಿಯಲ್ಲೇ ಸೆಟ್ಲ್‌ಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ದೂರಿದರು. ಹಾಸನ  ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸರ್ಕಾರದಿಂದಲೇ ಸೆಟ್ಲ್‌ಮೆಂಟ್ ಕಚೇರಿಯನ್ನು ತೆರೆದು ಅದಕ್ಕೆ ಹಾಸನದ ಡಿವೈಎಸ್ಪಿಯನ್ನು ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಟೀಕಿಸಿದರು.

ಉರಿಗೌಡ ಮತ್ತು ನಂಜೇಗೌಡ ಹೆಸರಿನ ನಕಲಿ ಆಧಾರ್ ಕಾರ್ಡ್ ಬಿಡುಗಡೆ…

‘ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚೆ ಮಾಡಿದ್ರೆ ಯಾರ ಹೊಟ್ಟೇನೂ ತುಂಬಲ್ಲ..’

ಕರ್ನಾಟಕ‌ ಒಳ್ಳೆ ದಿಕ್ಕಿನಲ್ಲಿ ನಡೆಯಬೇಕಾದ್ರೆ, ಕಾಂಗ್ರೇಸ್ ನವರ ಗ್ಯಾರೆಂಟಿಗಳು ಅನ್ ಗ್ಯಾರೆಂಟಿ

- Advertisement -

Latest Posts

Don't Miss