International News: ಇಸ್ರೇಲ್‌ಗೆ ಭಾರತ ಬೆಂಬಲಿಸುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ವಿರೋಧಿ ದೇಶ ಇರಾನ್, ಮುಂಬೈ ಹಡಗನ್ನು ವಶಪಡಿಸಿಕೊಂಡಿದೆ.
ಯುಎಇಯಿಂದ ಸರಕು ತುಂಬಿಸಿಕೊಂಡು ಭಾರತಕ್ಕೆ ಬರುತ್ತಿದ್ದ ಹಡಗನ್ನು ಇರಾನ್ ವಶಕ್ಕೆ ಪಡೆದಿದೆ. ಇದಕ್ಕೆ ಕಾರಣವೇನು ಅಂದ್ರೆ, ಇರಾನ್‌ನ ಬದ್ಧ ವೈರಿ ಇಸ್ರೇಲ್‌ಗೆ ಭಾರತ ಬೆಂಬಲಿಸುತ್ತಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧದಲ್ಲಿ ಭಾರತ ಇಸ್ರೇಲ್‌ಗೆ ಬೆಂಬಲಿಸುತ್ತಿದೆ. ಇದೇ ಸಿಟ್ಟಿನಲ್ಲಿ ಇರಾನ್ ಮುಂಬೈ ಹಡಗನ್ನು ವಶಕ್ಕೆ ಪಡೆದಿದೆ. ಅಲ್ಲದೇ, ಈ ಹಡಗು ಕೂಡ ಇಸ್ರೇಲ್‌ಗೆ ಸಂಬಂಧಿಸಿದ್ದಾಗಿದೆ ಎಂದು ವರದಿಯಾಗಿದೆ.
ಈ ಹಡಗಿನಲ್ಲಿ ಭಾರತದ 17 ಮಂದಿಯಿಂದ್ದು, ಅವರನ್ನು ಸಹ ಇರಾನ್ ಬಂಧಿಸಿದೆ. ಆ 17 ಮಂದಿಯನ್ನು ಬಿಡುಗಡೆ ಮಾಡಬೇಕು ಎಂದು ಭಾರತ ಸರ್ಕಾರ ಇರಾನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದೆ. ಇನ್ನು ಇರಾನ್ ಮುಂಬೈ ಹಡಗು ವಶಪಡಿಸಿಕೊಳ್ಳುವ ಸುದ್ದಿ ಹೊರಬೀಳುತ್ತಿದ್ದಂತೆ, ಆಕ್ರೋಶ ಹೊರಹಾಕಿರುವ ಇಸ್ರೇಲ್, ಪರಿಸ್ಥಿತಿ ಉದ್ವಿಗ್ನಗೊಂಡರೆ, ಅದರ ಪರಿಣಾಮವನ್ನು ಇರಾನ್ ಎದುರಿಸಬೇಕಾಗುತ್ತದೆ ಎಂದು ಇಸ್ರೇಲ್ ತಿಳಿಸಿದೆ.
ಧೋನಿಯನ್ನು ನೋಡಲು 64 ಸಾವಿರ ರೂ. ಖರ್ಚು ಮಾಡಿದ ಅಭಿಮಾನಿ, ಆದರೆ ಮಕ್ಕಳ ಫೀಸ್ ಕಟ್ಟಲು ದುಡ್ಡಿಲ್ಲ
ನನ್ನ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ಜೋಶಿ ಪರ ಮತಯಾಚನೆಗೆ ಧಾರವಾಡಕ್ಕೆ ಬಂದ ಕೋರೆ..