ನಿನ್ನೆ ತಾನೇ ರಿಷಬ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲಾ ಗಿರಿಕಥೆ ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕಪ್ರಭುಗಳು ಭೇಷ್ ಎಂದಿದ್ದಾರೆ. ಹಲವರು ಈ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದು ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ.
ಟೈಟಲ್ ನೋಡಿ ಯಾವಾಗ್‌ಲೂ ಸಿನಿಮಾ ನೋಡೋಕ್ಕೆ ಬರಬೇಡಿ, ಬದಲಾಗಿ ನಟ ಮತ್ತು ನಿರ್ದೇಶಕನನ್ನು ನೋಡಿ ಸಿನಿಮಾ ನೋಡೋಕ್ಕೆ ಬನ್ನಿ. ನಾನು ಏನಿದು ಟೈಟಲ್ ಚನಾಗಿರತ್ತೋ, ಇಲ್ಲವೋ ಅನ್ನೋ ಡೌಟಲ್ಲೇ ಬಂದೆ. ಆದ್ರೆ ಸಿನಿಮಾ ತುಂಬಾ ಚೆನ್ನಾಗಿದೆ. ನಾನು ಸಿನಿಮಾ ಕಥೆ ಬಗ್ಗೆ ಹೇಳೋದಿಲ್ಲ. ನೀವೇ ಸಿನಿಮಾನಾ ನೋಡೋದು ಬೆಟರ್ ಅಂದಿದ್ದಾರೆ, ಸಿನಿಮಾ ನೋಡಿದ ಪ್ರೇಕ್ಷಕರು.
ಅಲ್ಲದೇ ಅಪ್ಪನ ಸೆಂಟಿಮೆಂಟ್, ಬಡತನ ಮೀರಿ ಬರುವ ರೀತಿಯನ್ನ ರಿಷಬ್ ಸೂಪರ್ ಆಗಿ ತೋರಿಸಿದ್ದಾರೆ. ಎಲ್ಲರ ನಟನೆ ಗಮನ ಸೆಳೆಯುವಂತಿದೆ. ಕಾಮಿಡಿ, ಎಮೋಷನಲ್ ಎಲ್ಲವೂ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಮೂವಿ ತುಂಬಾ ಚೆನ್ನಾಗಿದೆ ಅಂತಾ ಸಿನಿಮಾ ನೋಡಿದವರು ಹೇಳಿದ್ದಾರೆ. ಈ ಮೂಲಕ ರಿಷಬ್ ಬತ್ತಳಿಕೆಯಿಂದ ಬಂದ ಇನ್ನೊಂದು ಸಿನಿಮಾ ಹಿಟ್ ಆಗುವ ಎಲ್ಲ ಲಕ್ಷಣವೂ ಎದ್ದು ಕಾಣ್ತಿದೆ.