Wednesday, September 11, 2024

Latest Posts

ಸೆಟ್ಟೇರಿತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು‌ನಿರೀಕ್ಷಿತ ‘ಟಾಕ್ಸಿಕ್’

- Advertisement -

Sandalwood News: ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಸೆಟ್ ಆಫೀಸರ್ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞರ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.

ಇದೊಂದು ರೀತಿ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬ. ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ಟಾಕ್ಸಿಕ್ಸ್ ಮುಹೂರ್ತ ವೇಳೆ ಯಶ್ ಆಪ್ತರು ಭಾಗವಹಿಸಿದ್ದರು.

ಇಂದು ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಟಾಕ್ಸಿಕ್ ಗೆ ಮುಹೂರ್ತ ನೆರವೇರಿದ್ದು ವಿಶೇಷ.
ಎಚ್ ಎಮ್ ಟಿ ಫ್ಯಾಕ್ಟರಿಯಲ್ಲಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್ ನಲ್ಲೇ ಮುಹೂರ್ತ ನಡೆಸಲಾಗಿದೆ.
ಇಂದಿನಿಂದಲೇ ಟಾಕ್ಸಿಕ್ ಶೂಟಿಂಗ್ ನಲ್ಲಿ ರಾಕಿಭಾಯ್ ಭಾಗಿಯಾಗಿದ್ದಾರೆ.

ಮೂರು ವರ್ಷಗಳ ನಂತರ ಕೊನೆಗೂ ಯಶ್ ಅವರ 19 ಚಿತ್ರಕ್ಕೆ ಚಾಲನೆ ದೊರೆತಿದೆ‌ ಟಾಕ್ಸಿಕ್ ಶುರುಮಾಡುವ ಮೊದಲೇ,ಸೂರ್ಯ ಸದಾಶಿವ ರುದ್ರ, ಮಂಜುನಾಥನ ದರ್ಶನ ಪಡೆದು ಬಂದಿದ್ದರು ನಟ ಯಶ್. ಗೀತು ಮೋಹಮ್ ದಾಸ್ ನಿರ್ದೇಶನದ ,ಕೆವಿಎನ್ ಪ್ರೊಡಕ್ಷನ್ ಬ ಕೆ. ವೆಂಕಟ್ ನಾರಾಯಣ ನಿರ್ಮಾಣದಲ್ಲಿ ಈ ಸಿನಿಮಾ ಶುರುವಾಗುತ್ತಿದೆ.

- Advertisement -

Latest Posts

Don't Miss