ಕೊನೆಗೂ ಐಸೋಲೇಷನ್ ನಿಂದ ಹೊರ ಬಂದ ರೋಹಿತ್

ಬರ್ಮಿಂಗ್‍ಹ್ಯಾಮ್: ಕೊರೋನಾ ಸೋಂಕಿಗೆ ಗುರಿಯಾಗಿದ್ದ ನಾಯಕ ರೋಹಿತ್ ಶರ್ಮಾ ಕೊನೆಗೂ ಚೇತರಿಸಿಕೊಂಡು ಐಸೋಲೇಷನ್‍ನಿಂದ ಹೊರ ಬಂದಿದ್ದಾರೆ.

ಮಹತ್ವದ ಆಂಗ್ಲರ ವಿರುದ್ಧದ ಐದನೆ ಟೆಸ್ಟ್‍ಗೆ ಅಲಭ್ಯರಾಗಿದ್ದರು.

ಜು.7ರಿಂದ ಸೌಥಾಂಪ್ಟನ್‍ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಸೀಮಿತ ಓವರ್‍ಗಳ ಸರಣಿಗೆ ಲಭ್ಯರಾಗಲಿದ್ದಾರೆ.

ಕೊರೊನಾ ಪರೀಕ್ಷೆಯಲ್ಲಿ ರೋಹಿತ್ ಅವರಿಗೆ ನೆಗೆಟಿವ್ ಬಂದಿದೆ. ನಿಯಮದ ಪ್ರಕಾರ ಅವರು ಕ್ವಾರಂಟೈನ್‍ನಿಂದ ಹೊರ ಬಂದಿದ್ದಾರೆ. ಸದ್ಯ ನಾರ್ಥಂಪ್ಟನ್‍ಶೈರ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ. ಟಿ20 ಸರಣಿಗೂ ಮುನ್ನ ತರಬೇತಿ ಬೇಕಾಗಿದೆ.

 

 

 

About The Author