Friday, October 18, 2024

Latest Posts

Russia-Ukraine War : ಉಕ್ರೇನ್ ಗೆ ತೆರಳಿದ್ದ ಏರ್ ಇಂಡಿಯಾ ವಿಮಾನ ವಾಪಾಸ್..!

- Advertisement -

ರಷ್ಯಾ ಉಕ್ರೇನ್ ವಿರುದ್ಧ ಯುದ್ಧ (Russia war against Ukraine) ಘೋಷಣೆ ಮಾಡಿದ್ದು, ಬಾರಿ ಪ್ರಮಾಣದ ಗುಂಡಿನ ದಾಳಿಯನ್ನು ಮಾಡುತ್ತಿದೆ. ಇನ್ನು ಉಕ್ರೇನ್ ನಲ್ಲಿ 20ಸಾವಿರಕ್ಕೂ ಹೆಚ್ಚು ಭಾರತೀಯರು ಇದ್ದು, ರಷ್ಯಾ ಹಾಗೂ ಉಕ್ರೇನ್ ನಡುವೆ ಉಂಟಾಗಿರುವ ಅಂತಹ ಬಿಕ್ಕಟ್ಟಿನಿಂದ ಭಾರತೀಯರು ಅಲ್ಲಿಂದ ಸ್ವದೇಶಕ್ಕೆ ಬರಲು ಮುಂದಾಗಿದ್ದಾರೆ. ಇನ್ನು ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಹೋಗಿದ್ದ ಏರ್ ಇಂಡಿಯಾ ವಿಮಾನ (Air India flight) ವಾಪಸ್ಸಾಗಿದೆ. ಉಕ್ರೇನ್ ನಾ ಪೂರ್ವಭಾಗದಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಿರುವ ಕಾರಣ ವಾಯುಯಾನ ಪ್ರದೇಶವನ್ನು ಮುಚ್ಚಲಾಗಿದೆ ಎಂದು ಉಕ್ರೇನ್ ಹೇಳಿದ ಬಳಿಕ ಏರ್ ಇಂಡಿಯಾ ವಿಮಾನ ದೆಹಲಿಗೆ ಹಿಂದಿರುಗುತ್ತಿದೆ. ಇನ್ನು ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭದ್ರತಾ ಮಂಡಳಿ ಸಭೆ (Security Council Meeting) ಕರೆದು ಮಾತುಕತೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಭಾರತ ಎರಡು ರಾಷ್ಟ್ರಗಳಿಗೆ ಶಾಂತಿ ಹಾಗೂ ಸ್ಥಿರತೆ (Peace and stability) ಕಾಪಾಡಿಕೊಳ್ಳುವಂತೆ ಮನವಿ ಮಾಡಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧಗಳನ್ನು ವಿಧಿಸಿ ಎಚ್ಚರಿಕೆಯನ್ನು ನೀಡಿದೆ. ಉಕ್ರೇನ್ ಬಿಕ್ಕಟ್ಟಿನ ವಿಚಾರದ ಕುರಿತಂತೆ ಭಾರತದ ಸ್ವತಂತ್ರ ನಿಲುವನ್ನು ನಾವು ಸ್ವಾಗತಿಸುತ್ತೇವೆ. ಭಾರತದ ಈ ನಡೆ ಪ್ರತಿಬಿಂಬಿಸುತ್ತದೆ ರಷ್ಯಾ ಶ್ಲಾಫಿಸಿದೆ. ವಿಶ್ವಸಂಸ್ಥೆಯ ತುರ್ತುಸಭೆಯಲ್ಲಿ ಭಾಗವಹಿಸಿದ್ದ ಭಾರತ ಉಕ್ರೇನ್ ಮತ್ತು ರಷ್ಯಾ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಬುಶ್ಕಿನ್ (Babushkin) ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆ ಯಾರಿಗೂ ಯಾವುದೇ ಬೆದರಿಕೆಯನ್ನು ಪ್ರತಿನಿಧಿಸುವುದಿಲ್ಲ. ಭಾರತ-ರಷ್ಯಾ ಸಂಬಂಧ (India-Russia relationship) ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ ಎಂದು ರೋಮನ್ ಬಾಬುಶ್ಕಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss