ಇತ್ತೀಚಿನ ದಿನಗಳಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವುದು ಒಂದು ಫ್ಯಾಶನ್ ಆಗಿ ಹೋಗಿದೆ. ಹಲವರ ಮನೆಯಲ್ಲಿ ಯಾವಾಗಲೂ ಫ್ರಿಜ್‌ನಲ್ಲಿ ಕೂಲ್ ಡ್ರಿಂಕ್ಸ್ ಇರಲೇಬೇಕು. ಯಾಕಂದ್ರೆ ಅದನ್ನ ತಾವು ಕುಡಿಯುವುದಲ್ಲದೇ, ಬಂದವರಿಗೂ ಅದನ್ನೇ ಕೊಡ್ತಾರೆ. ಯಾಕಂದ್ರೆ ಅದು ತುಂಬಾ ಈಸಿ, ಬಾಟಲಿಯ ಮುಚ್ಚಳ ತೆಗೆದು ಗ್ಲಾಸಿಗೆ ಹಾಕಿ ಕೊಟ್ರೆ ಸಾಕು. ಆದ್ರೆ ಹೀಗೆ ಈಸಿಯಾಗಿ ಕೈಗೆ ಸಿಗುವ ಕೂಲ್ ಡ್ರಿಂಕ್ಸ್ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅನ್ನುವ ಅಂದಾಜು ಕೂಡ ಹಲವರಿಗಿಲ್ಲ. ಹಾಗಾದ್ರೆ ಯಾಕೆ ಕೂಲ್ ಡ್ರಿಂಕ್ಸ್ ಕುಡಿಯಬಾರದು ಅಂತಾ ತಿಳಿಯೋಣ ಬನ್ನಿ..
ಕೂಲ್ ಡ್ರಿಂಕ್ಸ್ ನಲ್ಲಿ ಸಿಂಥೆಟಿಕ್ ಕೆಮಿಕಲ್, ಕಾರ್ಬನ್ ಡೈ ಆಕ್ಸೈಡ್ ಇರುತ್ತದೆ. ನಮ್ಮ ದೇಹ ಆಕ್ಸಿಜನ್ ಒಳತೆಗೆದುಕೊಂಡು, ಕಾರ್ಬನ್ ಡೈ ಆಕ್ಸೈಡನ್ನ ಹೊರ ಸೂಸುತ್ತದೆ. ಯಾಕಂದ್‌ರೆ ಕಾರ್ಬನ್ ಡೈ ಆಕ್ಸೈಡ್ ದೇಹದಲ್ಲಿರುವುದು ಒಳ್ಳೆಯದಲ್ಲವೆಂದು. ಆದ್ರೆ ಈ ತಂಪು ಪಾನೀಯದಲ್ಲಿ ಕಾರ್ಬನ್ ಡೈ ಆಕ್ಸೈಡ್ ಇದ್ದು, ಇದು ವಿಷಕ್ಕೆ ಸಮಾನವಾಗಿದೆ. ಹಾಗಾಗಿ ಸಾಫ್ಟ್ ಡ್ರಿಂಕ್‌ಗಳು ಸ್ಲೋ ಪಾಯ್ಸನ್‌ಗಳಾಗಿದೆ.
ಪ್ರಪಂಚದಲ್ಲಿ ಶೇಕಡಾ 99ರಷ್ಟು ಕಿಡ್ನಿ ಫೇಲ್ ಆದವರು, ಸಾಫ್ಟ್ ಡ್ರಿಂಕ್ಸ್ ಕುಡಿದೇ ಆರೋಗ್ಯ ಹಾಳು ಮಾಡಿಕೊಂಡಿದ್ದಾರೆಂದು ಸಾಬೀತಾಗಿದೆ. ಹಾಗಾಗಿ ಕಿಡ್ನಿ ಫೇಲ್ ಆಗಬಾರದು. ಜೀವನ ಚೆನ್ನಾಗಿರಬೇಕು ಅಂದ್ರೆ, ಸಾಫ್ಟ್ ಡ್ರಿಂಕ್ಸ್ ಕುಡಿಯುವುದನ್ನ ಬಿಡಬೇಕು. ಅಲ್ಲದೇ, ಇದರ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಹೃದಯ ರೋಗ ಬರುತ್ತದೆ. ಬಿಪಿ ಶುಗರ್ ಸೇರಿ ಹಲವು ರೋಗಗಳು ಬರುವ ಸಾಧ್ಯತೆ ಇದೆ.