ರಾಯಚೂರು : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿರುವ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಬಿಜೆಪಿ ಪಕ್ಷದ ಸಾಧನೆಯನ್ನು ಜನರಿಗೆ ತಿಳಿಸಿ ಎಂದು ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕರಾದ ತಿಪ್ಪರಾಜ್ ಹವಾಲ್ದಾರ್ ತಿಳಿಸಿದರು.
ಅವರಿಂದು ಗಿಲ್ಲೆಸೂಗೂರು ಜಿ.ಪಂ ವ್ಯಾಪ್ತಿಯ ಎಲೆಬಿಚ್ಚಾಲಿ ಗ್ರಾಮದಲ್ಲಿಂದು ಬಿಜೆಪಿ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದವರು 2013 ರಿಂದ 2018 ಅವಧಿಯಲ್ಲಿ ಶಾಸಕನಾಗಿ ಈ ಜಿ.ಪಂ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು. ಕಳೆದ ಚುನಾವಣೆಯಲ್ಲಿ ಅವುಗಳನ್ನು ಜನತೆಗೆ ಮನವರಿಕೆ ಮಾಡುವಲ್ಲಿ ವಿಫಲವಾಗಿರುವುದರಿಂದಲೇ ಸೋಲನ್ನಪ್ಪಿದ್ದೇವೆ ಈ ಹಿನ್ನೆಲೆಯಲ್ಲಿ ಪೇಜ್ ಪ್ರಮುಖರು ತಮ್ಮ ವ್ಯಾಪ್ತಿಯಲ್ಲಿ ಪಕ್ಷದ ಸಂಘಟನೆಗೆ ಅಧಿಕ ಒತ್ತನ್ನು ನೀಡಬೇಕೆಂದು.
ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ , ಮಾಜಿ ಜಿ.ಪಂ ಸದಸ್ಯರಾದ ಹಂಪನಗೌಡ ಗಿಲ್ಲೆಸೂಗೂರು , ಕೊಪ್ಪಳ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ತಾಳಕೇರಿ, ವರಪ್ರಸಾದರೆಡ್ಡಿ ತಲಮಾರಿ, ಮಲ್ಲಿಕಾರ್ಜುನ ಸ್ವಾಮಿ, ಬಸವರಾಜ ಸ್ವಾಮಿ, ನೀಲಪ್ಪಗೌಡ ಹೀರಾಪೂರು, ವೀರೇಶ್ ಬಡಿಗೇರ್, ರಾಮಲಿಂಗಪ್ಪ ಸಾಹುಕಾರ್, ನರಸಿಂಹ ಸಾಹುಕಾರ್, ನರಸಿಂಹ ಹಂಚಿನಾಳ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉರುಕುಂದಮ್ಮ ವೀರೇಶ್ ನಾಯಕ್ ಸೇರಿದಂತೆ ಜಿ.ಪಂ ವ್ಯಾಪ್ತಿಯ ಗ್ರಾ.ಪಂ ಸದಸ್ಯರುಗಳು ,ಮುಖಂಡರುಗಳು ,ಬೂತ್ ಸಮಿತಿಯ ಅಧ್ಯಕ್ಷರು ,ಪೇಜ್ ಪ್ರಮುಖರು ಉಪಸ್ಥಿತರಿದ್ದರು.