Friday, March 29, 2024

Latest Posts

‘ಈ ಹೋರಾಟದ ಮುಂದೆ ನನ್ನ ಕೆಲಸ ಚಿಕ್ಕದು, ಅವಶ್ಯಕತೆ ಇದ್ದರೆ, ಕೆಲಸವನ್ನೂ ಬಿಡುತ್ತೇನೆ’

- Advertisement -

Sports News: ನವದೆಹಲಿ: ಬಿಜೆಪಿ ಸಂಸದ ಬ್ರಿಭೂಷಣ ಮೇಲೆ ಕಿರುಕುಳ ಆರೋಪ ಮಾಡಿ, ಕುಸ್ತಿಪಟುಗಳು ಹಲವು ದಿನಗಳಿಂದ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ನಿನ್ನೆ ಬಿಜೆಪಿ ನಾಯಕ ಅಮಿತ್ ಶಾ ನಿವಾಸದಲ್ಲಿ ಕುಸ್ತಿಪಟುಗಳು ಈ ಬಗ್ಗೆ ಮಾತುಕತೆ ನಡೆಸಿದ್ದು, ತಪ್ಪು ಯಾರದ್ದೇ ಇದ್ದರೂ, ತಾವು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ, ಅಮಿತ್ ಶಾ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಸಾಕ್ಷಿ ಟ್ವೀಟ್ ಕೂಡ ಮಾಡಿದ್ದರು, ನಾನು ಪ್ರತಿಭಟನೆಯ ಜೊತೆಗೆ ರೈಲ್ವೆ ಇಲಾಖೆಯಲ್ಲಿ, ನನ್ನ ಕರ್ತವ್ಯವನ್ನೂ ನಿಭಾಯಿಸುತ್ತಿದ್ದೇನೆ ಎಂದು ಬರೆದಿದ್ದರು. ಇದೀಗ ಸಾಕ್ಷಿ ಇನ್ನೊಂದು ಟ್ವೀಟ್ ಮಾಡಿದ್ದು, ಈ ಟ್ವೀಟ್‌ ನೋಡಿದಾಗ, ಇವರ ಕೆಲಸಕ್ಕೂ ಯಾರೋ ಅಡ್ಡಿಬಂದಂತೆ ತೋರುತ್ತಿದೆ.

ನಮ್ಮ ಪದಕಗಳಿಗೆ ತಲಾ 15 ರೂಪಾಯಿ ಎಂದು ಹೇಳಿದವರು ಈಗ ನಮ್ಮ ಕೆಲಸಗಳ ಹಿಂದೆ ಬಿದ್ದಿದ್ದಾರೆ. ನಮ್ಮ ಜೀವನ ಅಪಾಯದಲ್ಲಿದೆ, ಅದರ ಮುಂದೆ ಕೆಲಸವು ತುಂಬಾ ಚಿಕ್ಕದಾಗಿದೆ. ಕೆಲಸವು ನ್ಯಾಯದ ಹಾದಿಗೆ ಅಡಚಣೆಯಾಗುತ್ತದೆ ಎಂದಾದರೆ, ಅದನ್ನು ಬಿಡಲು ನಾವು ಹತ್ತು ಸೆಕೆಂಡುಗಳು ಸಹ ತೆಗೆದುಕೊಳ್ಳುವುದಿಲ್ಲ. ಕೆಲಸದ ಭಯವನ್ನು ತೋರಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ..

‘ಬೆಂಗಳೂರಿನ ವೈಭವ, ಗೌರವವನ್ನು ಮರಳಿ ತರಲು ಕಾಂಗ್ರೆಸ್‌ ಸರ್ಕಾರ ಬದ್ಧ’

‘ನಾನು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ’

ಪಾರ್ಟಿ ಮುಗಿಸಿ, ಕಾರಿನಲ್ಲಿ ಮಲಗಿದ್ದ ಯುವಕನ ಅನುಮಾನಾಸ್ಪದ ಸಾವು..

- Advertisement -

Latest Posts

Don't Miss