Sunday, June 1, 2025

Latest Posts

ಮೇಕಪ್ ಆರ್ಟಿಸ್ಟ್ ಶುರಾ ಖಾನ್‌ ಜೊತೆ ಸಲ್ಮಾನ್ ಸಹೋದರನ ಎರಡನೇಯ ವಿವಾಹ

- Advertisement -

Movie News: ಬಾಲಿವುಡ್ ನಟ ಸಲ್ಮಾನ್ ಸಹೋದರನಾದ ಅರ್ಬಾಜ್ ಖಾನ್ ಎರಡನೇಯ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಹಸೆಮಣೆ ಏರಿದ್ದಾರೆ.

1988ರಲ್ಲಿ ಮಲೈಕಾ ಅರೋರಾ ಅವರೊಂದಿಗೆ ವಿವಾಹವಾಗಿದ್ದ ಅರ್ಬಾಜ್, 19 ವರ್ಷಗಳ ಕಾಲ ಸಂಸಾರ ನಡೆಸಿದರು. ಬಳಿಕ ಇಬ್ಬರ ಜೀವನದಲ್ಲಿ ಮನಸ್ತಾಪ ಬಂದು, ಇಬ್ಬರೂ ದೂರವಾದರು. ಬಳಿಕ ಮಲೈಕಾ ಬಾಲಿವುಡ್ ನಟ ಅರ್ಜುನ್ ಕಪೂರ್‌ನೊಂದಿಗೆ ಅಫೇರ್ ಹೊಂದಿದ್ದರು. ಇತ್ತ ಅರ್ಬಾಜ್ ಕೂಡ ಇನ್ನೋರ್ವ ಸೆಲೆಬ್ರಿಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಆ ಸಂಬಂಧವೂ ಮುರಿದು ಬಿತ್ತು. ಇದೀಗ ಅರ್ಬಾಜ್ ಶುರಾ ಖಾನ್‌ನೊಂದಿಗೆ ವಿವಾಹವಾಗಿದ್ದಾರೆ. ಶುರಾ ಅರ್ಬಾಜ್‌ಗಿಂತ 22 ವರ್ಷ ಚಿಕ್ಕವರಂತೆ.

ಮಲೈಕಾ- ಅರ್ಬಾಜ್‌ಗೆ ಅರ್ಹಾನ್ ಎಂಬ ಪುತ್ರನಿದ್ದು, ಅವನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಇಂದು ಅಪ್ಪನ ಮದುವೆ ಎಂದು ಭಾರತಕ್ಕೆ ಬಂದ ಅರ್ಹಾನ್, ಅಪ್ಪನಿಗೆ ಶುಭಾಶಯ ಹೇಳಿದ್ದಾರೆ. ಇನ್ನು ಮಲೈಕಾ ಕೂಡ, ಮಾಜಿ ಪತಿಗೆ ಕೇಕ್ ಕಳಿಸಿ, ವಿಶ್ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ಈ ವಿವಾಹಕ್ಕೆ ಆಯ್ದ ಕೆಲವು ಸೆಲೆಬ್ರಿಟಿಗಳಿಗೆ ಮತ್ತು ಆತ್ಮೀಯರಿಗೆ ಮಾತ್ರ ಆಮಂತ್ರಣವಿತ್ತು.

ಸಿದ್ದರಾಮಯ್ಯ ಮುಗ್ಧ ಅಲ್ಲ, ಧೂರ್ತರಿದ್ದಾರೆ – ಕೇಂದ್ರ ಸಚಿವ ಜೋಶಿ ಕಿಡಿ

ಬಿ.ಕೆ.ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

ಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ: ಜಗದೀಶ್ ಶೆಟ್ಟರ್

- Advertisement -

Latest Posts

Don't Miss