Sandalwood News: ಉತ್ತರಪ್ರದೇಶದ ಅಲಹಾಬಾದ್‌ನ ಪ್ರಯಾಾಗ್‌ರಾ್ಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ನಟ ನೆನಪಿರಲಿ ಪ್ರೇಮ್ ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟ, ಕುಂಭಮೇಳ ಪುಣ್ಯಸ್ನಾನ. ಎಲ್ಲರ ಬಾಳು ಅಮೃತಮಯವಾಗಿರಲಿ ಎಂದು ಬರೆದುಕೊಂಡಿದ್ದಾರೆ.
144 ವರ್ಷಕ್ಕೊಮ್ಮೆ ಬರುವ ಈ ಕುಂಭ ಮೇಳದಲ್ಲಿ ಭಾಗಿಯಾಗಲೇಬೇಕೆಂದು 40ಕೋಟಿಗೂ ಹೆಚ್ಚು ಜನ ಈಗಾಗಲೇ ಕುಂಭ ಮೇಳಕ್ಕೆ ಬಂದು ಹೋಗಿದ್ದಾರೆ. ಇನ್ನು ಬರುತ್ತಲೇ ಇದ್ದಾರೆ. ಶಿವರಾತ್ರಿಯ ತನಕವೂ ಜನರಿಗೆ ಅಮೃತಸ್ನಾನದಲ್ಲಿ ಭಾಗವಹಿಸುವ ಅವಕಾಶವಿದೆ. ಬರೀ ಭಾರತದವರಷ್ಟೇ ಅಲ್ಲದೇ, ವಿದೇಶಿಗರು ಕೂಡ ಈ ಕುಂಭ ಮೇಳದಲ್ಲಿ ಭಾಗವಹಿಸಿ, ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ನಿನ್ನೆಯಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ದಂಪತಿ ಸಮೇತರಾಗಿ ಕುಂಭ ಮೇಳದಲ್ಲಿ ಭಾಗವಹಿಸಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ಮೊದಲು ಅವರ ಮಗಳು ಐಶ್ವರ್ಯಾ ಕೂಡ ಮಹಾಕುಂಭ ಮೇಳದಲ್ಲಿ ಭಾಗವಹಿಸಿದ್ದು, ಬಾಲಿವುಡ್ ಸೆಲೆಬ್ರಿಟಿಗಳು, ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿ ಹಲವು ಶ್ರೀಮಂತ ಉದ್ಯಮಿಗಳು ಕೂಡ ಮಹಾಕುಂಭ ಮೇಳಕ್ಕೆ ಬಂದು ಪುನೀತರಾಗಿದ್ದಾರೆ.