ಇದೇ ಜೂನ್ 10ಕ್ಕೆ ನಟ ಸುನೀಲ್ ರಾವ್ ನಟನೆಯ ತುರ್ತು ನಿರ್ಗಮನ ಸಿನಿಮಾ ರಿಲೀಸ್ ಆಗಲಿದೆ. ಈ ಕುರಿತು ನಟ ಸುನೀಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಈ ವೇಳೆ ಸ್ಯಾಂಡಲ್ ವುಡ್‌ನ ಎಲ್ಲ ನಟರ ಬಗ್ಗೆ ಕೇಳಿದಾಗ, ಸುನೀಲ್ ಆ ನಟರ ಬಗ್ಗೆ ತಮಗೇನು ಅಭಿಪ್ರಾಯವಿದೆ ಎಂದು ಹೇಳಿದ್ದು, ಅವರೇನು ಹೇಳಿದ್ದಾರೆಂದು ಕೇಳೋಣ ಬನ್ನಿ..
ಸುನೀಲ್ ಅವರಿಗೆ ಪುನೀತ್ ಬಗ್ಗೆ ಕೇಳಿದಾಗ, ಪುನೀತ್ ಅಂದ್ರೆ ಕೆಲವು ಸಲ ವಿಷಾದ ಬಿಟ್ಟು ಬೇರೆನೂ ಅನ್ನಿಸುವುದಿಲ್ಲ. ಅವರು ಇಷ್ಟು ಬೇಗ ಹೋಗಿದ್ದು, ಅನ್ಯಾಯ ಅನ್ನಿಸುತ್ತೆ ಎಂದು ಹೇಳುತ್ತ ಭಾವುಕರಾಗಿದ್ದಾರೆ. ಅವರಿರ್ಬೇಕಿತ್ತು, ನಾವು ಅವರನ್ನ ತುಂಬಾ ಮಿಸ್ ಮಾಡಿಕೊಳ್ತೀವಿ. ತುಂಬಾ ಒಳ್ಳೆ ವ್ಯಕ್ತಿ ಅವರು, ನಾವು ಈ ಘಟನೆ ನಡೆಯುವ 20 ದಿನದ ಹಿಂದೆ ಅವರನ್ನ ಭೇಟಿ ಮಾಡಿದ್ದೆ. ತುರ್ತು ನಿರ್ಗಮನ ಸಿನಿಮಾದ ಟ್ರೇಲರ್ ಪುನೀತ್ ಅವರೇ ಲಾಂಚ್ ಮಾಡಬೇಕಾಗಿತ್ತು. ಆದ್ರೆ ನಮ್ಮ ಸಿನಿಮಾದ ಹಾಡೊಂದನ್ನ ಅವರಿಗೆ ಈ ರೀತಿ ಅರ್ಪಿಸುತ್ತೇವೆಂದು ನಾವು ಅಂದುಕೊಂಡಿರಲಿಲ್ಲ ಎಂದರು.
ಇನ್ನು ದರ್ಶನ್ ಬಗ್ಗೆ ಮಾತನಾಡುವಾಗ, ದರ್ಶನ್ ಥರಾ ಸ್ನೇಹಜೀವಿನಾ ನಾನು ಎಲ್ಲೂ ಕಂಡಿಲ್ಲ. ನನಗೆ ದರ್ಶನ್ ಅಂದ್ರೆ ಅಂಬರೀಷ್ ಅಂಕಲ್ ನೆನಪಾಗ್ತಾರೆ. ಅವರು ಅಷ್ಟು ದೊಡ್ಡ ಸ್ಟಾರ್ ಆದ್ರೂ ತುಂಬಾ ಸಿಂಪಲ್ ಆಗಿರ್ತಾರೆ. ಪರಿಚಯಸ್ಥರಿಗಷ್ಟೇ ಅಲ್ಲದೇ, ಹೊರಗಿನವರ ಜೊತೆಗೂ ಪ್ರೀತಿಯಿಂದ ಮಾತನಾಡುವ ಸ್ವಭಾವದವರು ದರ್ಶನ್ ಎಂದು ಹೇಳಿದರು.
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕೇಳಿದಾಗ, ಅವರು ಕನ್ನಡದ ಹೆಮ್ಮೆ ಎಂದು ಹೇಳಿದ ಸುನೀಲ್, ನ್ಯಾಷನಲ್, ಇಂಟರ್‌ನ್ಯಾಷನಲ್ ಲೆವೆಲ್‌ನಲ್ಲಿ ಹೆಸರು ಮಾಡೋದು ಅಷ್ಟು ಸುಲಭದ ವಿಷಯವಲ್ಲ. ಅವರು ಕೆಲಸ ಮಾಡುವ ರೀತಿ, ಯೋಚನೆ ಮಾಡುವ ರೀತಿ, ದುಡಿದಿರೋ ರೀತಿ, ಶ್ರಮ ಪಟ್ಟಿರೋ ರೀತಿ, ಯಾರಾದ್ರೂ ನೋಡಿ ಮೆಚ್ಚುವಂಥ ವ್ಯಕ್ತಿ. ಇಡೀ ಭಾರತೀಯ ಚಿತ್ರರಂಗ, ಕನ್ನಡದತ್ತ ತಿರುಗಿ ನೋಡುವ ಹಾಗೆ ಮಾಡಿದ ರೀತಿ ನಿಜವಾಗ್ಲೂ ಅದ್ಭುತ ಎಂದು ಹೇಳಿದ್ದಾರೆ.
ಶಿವಣ್ಣನ ಬಗ್ಗೆ ಕೇಳಿದಾಗ, ಅವರ ಎವರ್ ಯೂತ್‌ಫುಲ್, ಎವರ್ ಎನರ್ಜಿಟಿಕ್, ಡಾನ್ಸಿಂಗ್ ಸ್ಟಾರ್. ಎಲ್ಲರಿಗೂ ಮಾದರಿಯಾಗಿರುವ ನಟ ಎಂದು ಸುನೀಲ್ ಹೇಳಿದ್ದಾರೆ.
ಇನ್ನು ಸುದೀಪ್ ಬಗ್ಗೆ ಕೇಳಿದಾಗ, ಅವರು ನನ್ನ ಸೀನಿಯರ್ ಆದ್ರೆ ನಾವು ಕ್ರಿಕೇಟ್ ಮ್ಯಾಚ್‌ನಲ್ಲಿ ಆಡ್ತಾ ಇರ್ತೀವಿ. ಒಳ್ಳೆಯ ಆ್ಯಕ್ಟರ್, ವೆರಿ ಗುಡ್ ಕ್ಯಾಪ್ಟನ್. ಓರ್ವ ಒಳ್ಳೆಯ ವ್ಯಕ್ತಿ. ಅಮಿತಾ ಬಚ್ಚನ್ ಜೊತೆಗೆಲ್ಲ ಕೆಲಸ ಮಾಡಿದವರು, ಅವರು ಸಾಧಕರು ಎಂದು ಸುನೀಲ್ ಹೇಳಿದ್ದಾರೆ.
ಶ್ರೀಮುರುಳಿಯವರ ಬಗ್ಗೆ ಕೇಳಿದಾಗ, ನಾನು ವಿಜಯ್ ರಾಘವೇಂದ್ರ ಅವರನ್ನ ಅಣ್ಣಾವ್ರೇ ಅಂತಾ ಕರೀತಿನಿ. ಯಾಕಂದ್ರೆ ಅವ್ರು ಅಣ್ಣಾವ್ರ ಥರಾ ಹಾಡ್ತಾರೆ ಮತ್ತು ನಟಿಸ್ತಾರೆ. ಮುರುಳಿಯನ್ನ ನಾನು ಅಣ್ಣಾವ್ರ ತಮ್ಮಾ ಅಂತಾ ಕರೀತಿನಿ. ತುಂಬಾ ವರ್ಷದಿಂದ ಅವರು ನನಗೆ ಪರಿಚಯ. ತುಂಬಾ ಒಳ್ಳೆ ವ್ಯಕ್ತಿ. ಅವರು ನನಗಿಂತ ಚಿಕ್ಕವರಾಗಿರುವುದರಿಂದ ನನಗೆ ಅಕ್ಕರೆ ಜಾಸ್ತಿ ಅಂತಾ ಹೇಳಿದ್ರು.
ಇನ್ನು ಧ್ರರುವ ಸರ್ಜಾ ಬಗ್ಗೆ ಕೇಳಿದಾಗ, ಧ್ರುವನ ಜೊತೆ ಅಷ್ಟು ಒಡನಾಟ ಇಲ್ಲಾ. ಆದ್ರೆ ಅವರ ಆ್ಯಕ್ಟಿಂಗ್ ಸೂಪರ್. ಅವರು ಕೂಡ ಉತ್ತಮ ವ್ಯಕ್ತಿ ಅಂದರು.

