Wednesday, December 4, 2024

Latest Posts

Sandalwood News: ಟೆಕ್ನೀಷಿಯನ್ ಸೂ*ಸೈಡ್ ಯತ್ನ ಜಮೀರ್ ಪುತ್ರನ ವಿರುದ್ಧ ದೂರು

- Advertisement -

Sandalwood News: ಕನ್ನಡ ಚಿತ್ರರಂಗದಲ್ಲಿ ಎಲ್ಲವೂ ಸರಿ ಇದೆಯಾ? ಗೊತ್ತಿಲ್ಲ. ಸಿನಿಮಾಗಳಿಗೆ ಸಂಬಂಧಿಸಿದಂತೆ ದಿನ ನಿತ್ಯ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಚಿತ್ರೀಕರಣ ವಿಷಯದಲ್ಲಿರಬಹುದು, ನಿರ್ದೇಶಕ, ನಿರ್ಮಾಪಕರ ನಡುವಿನ ವಾಗ್ವಾದಗಳಿರಬಹುದು, ನಟ, ನಟಿಯರ ಮೇಲಿನ ಕೆಲ ಆರೋಪಗಳಿರಬಹುದು ಸಾಮಾನ್ಯವಾಗಿ ದೂರುಗಳು ಆಗಾಗ ಕೇಳಿಬರೋದು ಕಾಮನ್. ಅದರಲ್ಲೂ ಟೆಕ್ನೀಷಿಯನ್ಸ್ ವಿಚಾರದಲ್ಲಿ ಇದು ತುಸು ಹೆಚ್ಚೇ ಎಂದು ಹೇಳಬಹುದು.

ಇಲ್ಲೀಗ ಹೇಳಹೊರಟಿರುವ ವಿಷಯ, ಟೆಕ್ನೀಷಿಯನ್ ಒಬ್ಬ ಸೂಸೈಡ್ ಯತ್ನ ಮಾಡಿದ್ದಾರೆ. ಇದಕ್ಕೆ ಕಾರಣ, ಕನ್ನಡದ ಕಲ್ಟ್ ಚಿತ್ರ. ಈ ಸಂಬಂಧ ಸಚಿವ ಜಮೀರ್ ಪುತ್ರ ಆ ಸಿನಿಮಾದ ಹೀರೋ ಝೈದ್ ಖಾನ್ ಹಾಗು ನಿರ್ದೇಶಕ ಅನಿಲ್ ಮೇಲೆ ಮಾಗಡಿ ರಸ್ತೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ.

ಇಷ್ಟಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ದು ಡ್ರೋನ್ ಟೆಕ್ನೀಷಿಯನ್ ಸಂತೋಷ್. ಕಾರಣ, ಡ್ರೋನ್ ವಿಚಾರ. ಹಾಗಾದರೆ, ಸಂತೋಷ್ ಸೂಸೈಡ್ ಯತ್ನಕ್ಕೆ ಕಾರಣವೇನು ಅನ್ನುವುದಾದರೆ, ನವೆಂಬರ್ 25ರಂದು ಚಿತ್ರದುರ್ಗದಲ್ಲಿ ಜಮೀರ್ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಆ ಕಲ್ಟ್ ಸಿನಿಮಾಗೆ ಸಂತೋಷ್ ಡ್ರೋನ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಈಗಾಗಲೇ ಸಂತೋಷ್ ಹಲವಾರು ಸಿನಿಮಾಗಳಿಗೆ ಡ್ರೋನ್ ಟೆಕ್ನೀಷಿಯನ್ ಆಗಿ ಕೆಲಸ ಮಾಡಿದ್ದಾರೆ.

ಸಂತೊಷ್ 25 ಲಕ್ಷ ರೂ. ಸಾಲ ಸೋಲ ಮಾಡಿ ಸ್ವಂತಕ್ಕೆ ಡ್ರೋನ್ ಖರೀದಿಸಿದ್ದರು. ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆ ನೀಡುತ್ತಿದ್ದ ಸಂತೋಷ್, ದಿನವೊಂದರ ಚಿತ್ರೀಕರಣಕ್ಕೆ 25 ಸಾವಿರ ರೂ. ರೆಂಟ್ ನಿಗಧಿಪಡಿಸಿದ್ದರು. ಮಾರ್ಟಿನ್, ಯುವ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಂತೋಷ್ ಡ್ರೋನ್ ಕೆಲಸ ಮಾಡಿದ್ದರು. ಕಲ್ಟ್ ಸಿನಿಮಾಗೂ ಸಂತೋಷ್ ತಮ್ಮ ಡ್ರೋನ್ ಬಳಸಿದ್ದರು. ಅದಕ್ಕೂ ಮುನ್ನ, ಡ್ರೋನ್ ನಲ್ಲಿ ಶೂಟ್ ಮಾಡೋದು ಸ್ವಲ್ಪ ರಿಸ್ಕ್ ಇದೆ ಅಂತ ಸಂತೋಷ್ ಎಚ್ಚರಿಕೆ ಕೊಟ್ಟಿದ್ದರು. ಆದರೂ, ನಿರ್ದೇಶಕರು ಡ್ರೋನ್ ಬಳಸಲೇಬೇಕು ಎಂದು ಒತ್ತಾಯಿಸಿದ್ದರು ಎನ್ನಲಾಗಿದೆ.

ಶೂಟಿಂಗ್ ನಡೆವ ವೇಳೆ ಡ್ರೋನ್ ವಿಂಡ್ ಫ್ಯಾನ್​ ಗೆ ಟಚ್ ಆಗಿ ಪೀಸ್ ಪೀಸ್ ಆಗಿ ಬಿದ್ದಿದೆ. ಇದಾದ ಬಳಿಕ ಸಂತೋಷ್ ಗೆ ಚಿತ್ರತಂಡ ಸ್ವಲ್ಪವೂ ನಷ್ಟ ಕಟ್ಟಿಕೊಟ್ಟಿಲ್ಲ. ಈ ಸಿನಿಮಾವನ್ನು ಸಚಿವ ಜಮೀರ್ ಪುತ್ರ ಝೈದ್ ನಿರ್ಮಾಣ ಮಾಡುತ್ತಿದ್ದು, ಸಂತೋಷ್ ಝೈದ್ ಬಳಿ, ಪರಿಹಾರ ಕೊಡುವಂತೆ ಕೇಳಿದ್ದಾರೆ. ಆದರೆ, ಸಂತೋಷ್ ಬಳಿ ವೈಟ್ ಪೇಪರ್ ಮೇಲೆ ಜಮೀರ್ ಪುತ್ರ ಝೈದ್ ಖಾನ್ ಸಹಿ ಮಾಡಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲ, ರೆಕಾರ್ಡಿಂಗ್ ಆಗಿದ್ದ ಒಂದೂವರೆ ಲಕ್ಷ ರೂ. ಮೌಲ್ಯದ ಫುಟೇಜ್ ಇರುವ ಮೆಮೋರಿ ಕಾರ್ಡ್ ಕಿತ್ತುಕೊಂಡಿದ್ದಾರೆ. ಆಧಾರ್ ಕಾರ್ಡ್ ನಂಬರ್ ಸಹ ಬರೆಸಿಕೊಂಡು ಅವಮಾನ ಮಾಡಿದ್ದಾರೆ. ಇದರಿಂದ ಮನನೊಂದು ಸಂತೋಷ್ ತಮ್ಮ ಮನೆಯಲ್ಲೇ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಘಟನೆ ನಂತರ ಸಂತೋಷ್ ಸಹೋದರಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸದೇ ಹಿಂದಕ್ಕೆ ಕಳಿಸಿದ್ದರು ಎಂಬ ಆರೋಪವೂ ಕೇಳಿಬರುತ್ತಿದೆ. ನಂತರ ಆಸ್ಪತ್ರೆಯ ಮೆಮೊ ಮೇಲೆ ಎನ್ ಸಿ ಆರ್ ದಾಖಲಾಗಿದೆ. ಈ ಸಂಬಂಧ ಎಚ್ಚೆತ್ತುಕೊಂಡ ಪೊಲೀಸರು ಕಲ್ಟ್ ಸಿನಿಮಾ ತಂಡವನ್ನು ಸಂಪರ್ಕಿಸಿದ್ದಾರೆ. ಘಟನೆ ಕುರಿತಂತೆ ಸಿನಿಮಾ ನಿರ್ದೇಶಕ ಅನಿಲ್ ಅವರಿಗೆ ನೋಟಿಸ್ ನೀಡಿದ್ದಾರೆ. ಕಲ್ಟ್‌ ಚಿತ್ರತಂಡದ ಯಡವಟ್ಟಿನಿಂದಾಗಿ ಸಚಿವ ಜಮೀರ್ ಅಹ್ಮದ್ ಪುತ್ರ ಹಾಗೂ ಚಿತ್ರನಟ ಜೈದ್ ಖಾನ್ ವಿರುದ್ಧ ದೂರು ದಾಖಲಾಗಿದೆ.

ಮೊದಲೇ ಚಿತ್ರರಂಗದಲ್ಲಿ ಸಿನಿಮಾಳ್ಯಾವೂ ಸರಿಯಾಗಿ ಸದ್ದು ಮಾಡುತ್ತಿಲ್ಲ. ಅಂತಹದರಲ್ಲಿ ಇಂತಹ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ಇಂತಹ ಅದೆಷ್ಟೋ ಪ್ರಕರಣಗಳು ನಿತ್ಯ ನಡೆದರೂ ಅವು ಹೆ್ಚ್ಚಾಗಿ ಹೊರಬರುತ್ತಿಲ್ಲವಷ್ಟೇ. ಆದರೆ, ಸುಸೈಡ್ ಹಂತಕ್ಕೂ ಹೋದ ಟೆಕ್ನೀಷಿಯನ್ ಸಂತೋಷ್ ಗೆ ನಷ್ಟ ತುಂಬಿ ಕೊಡುವ ಭರವಸೆಯನ್ನಾದರೂ ಚಿತ್ರತಂಡ ನೀಡಬೇಕಿತ್ತು. ಎಲ್ಲೋ ಒಂದು ಕಡೆ ಬದುಕು ನಡೆಸೋಕೆ ಸಾಲ ಮಾಡಿ ಡ್ರೋನ್ ತಂದು ಪ್ರಾಮಾಣಿಕವಾಗಿ ಕೆಲಸ ಮಾಡುವ ಟೆಕ್ನೀಷಿಯನ್ ಗೆ ಇಂತಹ ಪರಿಸ್ಥಿತಿ ಬಂದರೆ, ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಪಾಡೇನು? ಎಂಬ ಪ್ರಶ್ನೆಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.

ವಿಜಯ್ ಭರಮಸಾಗರ, ಫಿಲ್ಮ್‌ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss