Wednesday, January 15, 2025

Latest Posts

Sandalwood News: ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪತ್ನಿಯೊಂದಿಗೆ ದರ್ಶನ್ ಸಂಕ್ರಾಂತಿ ಸಂಭ್ರಮ

- Advertisement -

Sandalwood News: ನಟ ದರ್ಶನ್ ತೂಗುದೀಪ ಇತ್ತೀಚೆಗೆ ಬೇಲ್ ಪಡೆದು ಜೈಲಿನನಿಂದ ಬಿಡುಗಡೆಯಾಗಿದ್ದಾರೆ. ಕುಟುಂಬಸ್ಥರೊಟ್ಟಿಗೆ ಕಾಲ ಕಳೆಯುತ್ತಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿದ್ದ ದಾಸನಿಗೆ ಬಳಿಕ ಬಂದ ಯಾವ ಹಬ್ಬವನ್ನೂ ಆಚರಿಸುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ ಈ ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಮೈಸೂರಿನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಕುಟುಂಬ ಸಮೇತರಾಗಿ ಆಚರಿಸಿದ್ದಾರೆ.

ದರ್ಶನ್ ಪ್ರತೀ ವರ್ಷವೂ ಸಂಕ್ರಾಂತಿ ಹಬ್ಬವನ್ನು ತಮ್ಮ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿಯೇ ಆಚರಿಸುತ್ತಾರೆ. ಏಕೆಂದರೆ, ಅಲ್ಲಿ ದರ್ಶನ್ ಸಾಕಿರುವ ಅವರ ನೆಚ್ಚಿನ ಪ್ರಾಣಿ, ಪಕ್ಷಿಗಳಿದೆ. ಆ ಪ್ರಾಣಿ, ಪಕ್ಷಿಗಳಿಗೆ ಆಹಾರ ತಿನ್ನಿಸಿ, ಹಸುವಿಗೆ ಶೃಂಗಾರ ಮಾಡಿ, ಪೂಜೆ ಮಾಡಿ, ಕುಟುಂಬಸ್ಥರೊಂದಿಗೆ ಅಲ್ಲಿಯೇ ಸಂಕ್ರಾಂತಿ ಆಚರಿಸೋದು, ದರ್ಶನ ಮೊದಲಿನಿಂದಲೂ ಆಚರಿಸಿಕೊಂಡು ಬಂದಿರುವ ಪದ್ಧತಿ.

ಅದರಂತೆ ದರ್ಶನ್ ಈ ವರ್ಷವೂ ಪತ್ನಿ ವಿಜಯಲಕ್ಷ್ಮೀ ಸೇರಿ ಕುಟುಂಬಸ್ಥರೊಟ್ಟಿಗೆ ಮೈಸೂರಿನ ಫಾರ್ಮ್‌ ಹೌಸಿನಲ್ಲಿಯೇ ಸಂಕ್ರಾಂತಿ ಆಚರಿಸಿದ್ದಾರೆ. ತಾವು ಸಾಕಿದ ಎತ್ತುಗಳನ್ನು ಸ್ನಾನ ಮಾಡಿಸಿ, ಅಲಂಕರಿಸಿ, ಕಿಚ್ಚು ಹಾಯಿಸಲಾಗುತ್ತದೆ. ಈ ರೀತಿ ದರ್ಶನ್ ಕುಟುಂಬ ಸಂಕ್ರಾಂತಿ ಆಚರಿಸಲಾಗುತ್ತದೆ.

- Advertisement -

Latest Posts

Don't Miss