Sandalwood News: ಟಗರು ಸಿನಿಮಾ ಶೂಟಿಂಗ್ ವೇಳೆ ನಟಿ ಅನಿತಾ ಭಟ್ ಡಾಲಿ ಧನಂಂಜಯ್ ಮೇಲೆ ಕುಳಿತು ಅವರಿಗೆ ಕಿಸ್ ಮಾಡಬೇಕಿತ್ತು. ಈ ವೇಳೆ ಆ ಸಿಚುಯೇಶನ್ ಅನಿತಾ ಹೇಗೆ ಹ್ಯಾಂಡಲ್ ಮಾಡಿದ್ರು ಅನ್ನೋ ಬಗ್ಗೆ, ಅನಿತಾ ಅವರೇ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ನಿರ್ದೇಶಕ ಸೂರಿ ಅವರು, ಅನಿತಾ ಅವರಿಗೆ ಯಾವ ರೀತಿ ಸೀನ್ ಇರುತ್ತದೆ ಅಂತಾ ವಿವರಿಸಿದ್ದರಂತೆ. ಆಗ ಅನಿತಾ ಅವರಿಗೆ ಸ್ವಲ್ಪ ಇರುಸು ಮುರಾುಸಾಗಿದ್ದು ನಿಜ. ಹಾಗಾಗಿ ಅವರು ಮೊದಲು ನಟಿಸಲು ಹಿಂದು ಮುಂದು ನಟಿಸಿದ್ದರು. ಬಳಿಕ ನಟಿಯನ್ನು ಛೇಡಿಸುವಂತೆ ಸೂರಿ ಅವರು, ಏನೂ ಮಾಡೋಕ್ಕೆ ಬರಲ್ವಾ ಅಂತಾ ಹೇಳಿದರಂತೆ. ಅದೇ ಸಿಟ್ಟಿಗೆ ಅನಿತಾ ನೋಡು ಇವಾಗ ಕೊಡ್ತೀನಿ ಅಂತಾ ಕಿಸ್ ಮಾಡಿ, ಒಂದೇ ಟೇಕ್‌ನಲ್ಲೇ ಶೂಟಿಂಗ್ ಮುಗಿಸಿದ್ದರಂತೆ.
ಇನ್ನೊಂದು ಸೀನ್‌ನಲ್ಲಿ ಅನಿತಾ ಅವರು ಬಿರಿಯಾನಿ ತಿನ್ನುವ ಸೀನ್ ಇದ್ದಿತ್ತು. ಆದರೆ ಪ್ಯೂರ್ ವೆಜಿಟೇರಿಯನ್. ಬ್ರಾಹ್ಮಣರ ಹುಡುಗಿ ಬಿರಿಯಾನಿ ತಿನ್ನಲ್ಲ ಅಂತ ತಿಳಿದು, ಬರೀ ಡೈಲಾಗ್‌ನಲ್ಲೇ ಆ ಸೀನ್ ಶೂಟಿಂಗ್ ಮಾಡಲಾಯಿತಂತೆ. ಇನ್ನೂ ಸಖತ್ ಇಂಟರೆಸ್ಟಿಂಗ್ ವಿಷಯಗಳನ್ನು ನಟಿ ಅನಿತಾ ಅವರು ಹಂಚಿಕೊಂಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

