Sandalwood News: ರಾಮಾಯಣ ಶೂಟಿಂಗ್ ಆರಂಭಕ್ಕೂ ಮುನ್ನ ಮಧ್ಯಪ್ರದೇಶದ ಪ್ರವಾಸದಲ್ಲಿರುವ ರಾಕಿಂಗ್ ಸ್ಟಾರ್ ಯಶ್, ಇಲ್ಲಿನ ಉಜ್ಜೇಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ.
ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣ ಶಿವನ ಭಕ್ತನಾಗಿದ್ದ. ಹಾಗಾಗಿ ಈ ಪಾತ್ರ ಮಾಡುವ ಮುನ್ನ ಯಶ್ ಮಹಾಕಾಳೇಶ್ವರನ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ.
ಇನ್ನು ರಾಕಿಂಗ್ ಸ್ಟಾರ್ ಯಶ್ ಬರೀ ಕನ್ನಡಿಗರಿಗಷ್ಟೇ ಹೀರೋ ಆಗಿ ಉಳಿದಿಲ್ಲ. ಬದಲಾಗಿ ಪ್ಯಾನ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ಕೆಜಿಎಫ್ ಮೂವಿ ಹಿಟ್ ಆದ ಬಳಿಕ, ಇಂಟರ್‌ನ್ಯಾಷನಲ್ ಲೆವಲ್‌ಗೆ ಅವರ ಪ್ರಸಿದ್ಧಿ ಪಸರಿಸಿದೆ. ವಿದೇಶದಲ್ಲೂ ಯಶ್‌ರನ್ನ ಗುರುತಿಸಿ, ಮಾತನಾಡಿಸುವವರಿದ್ದಾರೆ.
ಹೀಗಾಗಿ ಯಶ್ ತಮ್ಮ ರಾಾಜ್‌ಯಕ್ಕೆ ಬರುತ್ತಿದ್ದದ್ದನ್ನು ತಿಳಿದುಕೊಂಡ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ಯಶ್ ಅವರನ್ನು ಭೇಟಿಯಾಗಲು ಆಹ್ವಾನಿಸಿದ್ದಾರೆ. ಯಶ್ ಕೂಡ ಯಾದವ್ ಆಮಂತ್ರಣವನ್ನು ಕಡೆಗಣಿಸದೇ, ಸಮಯ ಮಾಡಿಕೊಂಡು ಮಧ್ಯಪ್ರದೇಶ ಸಿಎಂ ಅವರನ್ನು ಭೇಟಿಯಾಗಿ, ಮಾತುಕತೆ ನಡೆಸಿದ್ದಾರೆ. ಯಾದವ್ ಅವರ ಫೋಟೋ ಪೋಸ್ ನೋಡಿದ್ರೆ, ಯಶ್ ಅವರನ್ನು ಭೇಟಿಯಾಗಿ ಅವರಿಗೆಷ್ಟು ಖುಷಿಯಾಯಿತೆಂದು ತಿಳಿಯುತ್ತದೆ.