Tuesday, February 4, 2025

Latest Posts

Sandalwood News: ರಾವಣ ಆಗೋಕೂ ಕಾರಣವಿದೆ: ಗಜರಾಮ ಸಿನಿಮಾ ತಂಡದ ವಿಶೇಷ ಸಂದರ್ಶನ

- Advertisement -

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾದಲ್ಲಿ ಗಜರಾಮ ಸಿನಿಮಾ ಕೂಡ ಒಂದು. ಸಿನಿಮಾದ ಹೀರೋ, ರಾಜ್‌ವರ್ಧನ್ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ಸಿನಿಮಾ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ರಾಜ್‌ವರ್ಧನ್, ೀಈ ಸಿನಿಮಾದಲ್ಲಿ ನನ್ನದು ರೆಸ್ಲರ್ ಪಾತ್ರ. ಅದಕ್ಕೆ ಬೇಕಾದ ರೀತಿಯೇ ನನ್ನ ದೇಹವಿತ್ತು. ಸಿನಿಮಾ ಇಂಡಸ್ಟ್‌ರಿಗೆ ಬರಬೇಕು. ಇಂಥದ್ದೊಂದು ಪಾತ್ರ ಸಿಗಬೇಕು ಅಂತಾ ನಮಗೂ ಆಸೆ ಇರತ್ತೆ. ಅದೇ ರೀತಿ ನನಗೆ ಮೊದಲ ಭೇಟಿಯಲ್ಲೇ ಅವಕಾಶ ಸಿಕ್ಕಿತು. ನಿರ್ದೇಶಕರು ಮೊದಲ ಭೇಟಿಯಲ್ಲೇ ನನ್ನನ್ನು ನಾಯಕನಟನಾಗಿಿ ಮಾಡಲು ಆಯ್ಕೆ ಮಾಡಿದರು ಅಂತಾ ರಾಜ್‌ವರ್ಧನ್ ಸಿನಿಮಾ ಅನುಭವ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕರು, ನಮ್ಮ ಕಥೆಗೆ, ಆಜಾನುಬಾಹು ಹಾಗೆ ಇರುವ ಹೀರೋ ಅವಶ್ಯಕತೆ ಇತ್ತು, ರಾಜ್‌ವರ್ಧನ್ ಅವರನ್ನು ನೋಡಿದಾಗ, ನಮಗೆ ಬೇಕಾದ ಹೀರೋ ರೀತಿಯೇ ಇದ್ದಾರೆಂದು ಅನ್ನಿಸಿತು. ಬಳಿಕ ನಿರ್ಮಾಪಕರ ಬಳಿ ಮಾತನಾಡಿ, ಸಿನಿಮಾ ಶೂಟಿಂಗ್‌ಗೆ ವ್ಯವಸ್ಥೆ ಶುರು ಮಾಡಲಾಯಿತು ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss