Sandalwood News: ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ಪಡೆದ ಬಳಿಕ ಇಬ್ಬರು ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಹಲವು ಗಾಸಿಪ್ಗಳಿಗೆ ತೆರೆಎಳೆದಿದ್ದಾರೆ.
ಇಬ್ಬರ ಸಂಸಾರ ಹಾಳಾಗಲು ಮೂರನೇ ವ್ಯಕ್ತಿಯೇ ಕಾರಣ ಎಂಬ ಸುದ್ದಿ ಫೇಸ್ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಹಲ್ಚಲ್ ಎಬ್ಬಿಸಿತ್ತು. ಇದು ನಿವೇದಿತಾ ಹಾಗೂ ಚಂದನ್ ಶೆಟ್ಟಿಗೂ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಮೀಡಿಯಾಗಳ ಮುಂದೆ ಬಂದು ಸ್ಪಷ್ಟನೆ ನೀಡಿರುವ ಸ್ಟಾರ್ ಜೋಡಿ, 3ನೇ ವ್ಯಕ್ತಿ ನಮ್ಮ ಸಂಸಾರದಲ್ಲಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅದರಲ್ಲೂ ಮುಖ್ಯವಾಗಿ ಇಬ್ಬರು ಬೇರೆಯಾಗಲು ಸೃಜನ್ ಲೋಕೇಶ್ ಕಾರಣ ಎಂದು ಸದ್ದು ಮಾಡುತ್ತಿದ್ದ ಸುದ್ದಿಗೆ ಚಂದನ್ ಸ್ಪಷ್ಟನೆ ನೀಡಿದರು. ನಮ್ಮ ಜೀವನ ಅಂತ್ಯವಾಗಲು ಯಾವುದೇ ಮೂರನೇ ವ್ಯಕ್ತಿ ಕಾರಣವಲ್ಲ. ನಾವಿಬ್ಬರೂ ಚರ್ಚಿಸಿಯೇ ವಿಚ್ಚೇದನ ಪಡೆದುಕೊಂಡಿದ್ದೇವೆ ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದ ವಿಡಿಯೋ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಚಂದನ್ ಮೂರನೇ ವ್ಯಕ್ತಿಯ ಜೊತೆಗೆ ನಿವೇದಿತಾ ಅವರ ಜೊತೆಗೆ ಸಂಬಂಧ ಕಲ್ಪಿಸುತ್ತಿರುವುದು ನನಗೂ ಕೂಡ ತುಂಬಾ ಬೇಸರವಾಗಿದೆ. ಯಾಕೆಂದರೆ ಆ ವ್ಯಕ್ತಿ ಮನೆಗೆ ನಾನು ಕೂಡ ಸಾಕಷ್ಟು ಬಾರಿ ಹೋಗಿದ್ದೇನೆ. ಅವರ ಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಭಾಗಿಯಾಗುತ್ತಿದ್ದೆ. ಅವರು ತುಂಬಾ ಒಳ್ಳೆಯ ಫ್ಯಾಮಿಲಿ. ಅವರ ಮನೆಯ ಸಮಾರಂಭದಲ್ಲಿ ಭಾಗವಹಿಸುವುದು ನಮಗೂ ಖುಷಿ ಇದೆ. ಆ ವ್ಯಕ್ತಿ ಜೊತೆಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಕನ್ನಡಿಗರಾಗಿ ನಮಗೆ ಶೋಭೆ ಅಲ್ಲ ” ಎಂದಿದ್ದಾರೆ.
ಈ ಬಗ್ಗೆ ನಿವೇದಿತಾ ಗೌಡ ಕೂಡ ಸ್ಪಷ್ಟನೆ ನೀಡಿ, ಹೌದು ನನಗೆ ಅದನ್ನು ನೋಡಿದ ತಕ್ಷಣ ಬೇಜಾರಾಯ್ತು, ಚಂದನ್ ಹೇಳಿದ ಹಾಗೇ ನಾವೆಲ್ಲ ಫ್ಯಾಮಿಲಿ ಫ್ರೆಂಡ್ಸ್, ನಾವೆಲ್ಲ ಅವರ ಮನೆಗೆ ಹೋಗುತ್ತೇವೆ. ಏನಾದರೂ ಫಂಕ್ಷನ್ ಬಂದ್ರೆ ಎಲ್ಲರನ್ನೂ ಸೇರಿಸುತ್ತಾರೆ. ಅವರ ಫ್ಯಾಮಿಲಿ ಜೊತೆಗೆ ಒಳ್ಳೆಯ ಬಾಂಡಿಂಗ್ ಇದೆ. ಪ್ರತೀ ವರ್ಷವೂ ನಾನು ಅವರಿಗೆ ಬರ್ತಡೇ ವಿಶ್ ಮಾಡುತ್ತೇನೆ. ಅವರು ಕೂಡ ಮಾಡುತ್ತಾರೆ. ಈ ವರ್ಷ ಯಾಕೆ ಹೀಗಾಯ್ತು ಗೊತ್ತಿಲ್ಲ. ತುಂಬಾ ತಪ್ಪಿದು. ಅವರಿಗೂ ಫ್ಯಾಮಿಲಿ ಇದೆ. ಮಕ್ಕಳಿದ್ದಾರೆ. ಪ್ಲೀಸ್ ಯಾರಿಗೂ ಹರ್ಟ್ ಮಾಡಬೇಡಿ. ಏನೋ ಒಂದು ಪೋಸ್ಟ್ ಹಾಕಿದ ತಕ್ಷಣ, ಟ್ರೆಂಡಿಂಗ್ ಸಾಂಗ್ ಹಾಕಿದ ತಕ್ಷಣ, ಲವ್ ಇದೆ ಅದು ಇದು ಅಂತ ತುಂಬಾ ಜನ ಅವರಿಗೆ ಬೇಕಾದ ರೀತಿಯಲ್ಲಿ ಪೋಸ್ಟ್ ಮಾಡುತ್ತಾರೆ. ಇದು ನನಗೆ ತುಂಬಾ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ನಿವೇದಿತಾ ಅವರು, ಈ ವಿಚಾರ ವೈರಲ್ ಆದ ತಕ್ಷಣ ನಾನು ಅವರಿಗೆ ಮತ್ತು ಅವರ ಹೆಂಡತಿಗೆ ಕಾಲ್ ಮಾಡಿ ಕೇಳಿದೆ ಪ್ಲೀಸ್ ಬೇಜಾರು ಮಾಡಿಕೊಳ್ಳಬೇಡಿ ಎಂದು ಆಗ ಅವರೇ ಹೇಳಿದ್ರು ತಲೇನೆ ಕೆಡಿಸಿಕೊಳ್ಳಬೇಡ. ಅವರಿಬ್ಬರೂ ಕೂಡ ನನಗೆ ತುಂಬಾ ಸಪೋರ್ಟ್ ಮಾಡಿದ್ರು. ಬೇಸ್ ಲೆಸ್ ಆಗಿ ಏನೂ ಮಾತನಾಡಬೇಡಿ. ಇಲ್ಲದಿರುವುದನ್ನು ಹೇಳಿದರೆ ತುಂಬಾ ನೋವಾಗುತ್ತೆ. ಏನೂ ಕೂಡ ಗೊತ್ತಿಲ್ಲದೆ, ಪೋಸ್ಟ್ ನೋಡಿಕೊಂಡು ಮಾತನಾಡುವುದು ಈ ಥರ ಮಾತನಾಡುವುದು ತುಂಬಾ ತಪ್ಪು ಮನಸ್ಸಿಗೆ ಎಲ್ಲಿಲ್ಲದ ನೋವಾಗುತ್ತೆ ಎಂದಿದ್ದಾರೆ. ಈ ಮೂಲಕ ಚಂದನ್ ಹಾಗೂ ನಿವೇದಿತಾ ಅವರು ತಮ್ಮ ವಿರುದ್ಧ ಕೇಳಿಬಂದಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
Sandalwood News: ಯುವ ರಾಜ್ಕುಮಾರ್ ವಿಚ್ಛೇದನ- ಪತ್ನಿ ಶ್ರೀದೇವಿ ಸ್ಫೋಟಕ ಹೇಳಿಕೆ
ನಾವು ಸೋತರೂ ಒಳ್ಳೆ ಫೈಟ್ ಕೊಟ್ಟಿದ್ದೇವೆ: ಕಾಂಗ್ರೆಸ್ ಸೋಲಿನ ಬಗ್ಗೆ ಸಂತೋಷ್ ಲಾಡ್ ಮಾತು