5000 ಸಂಗೀತಾ ಫ್ಯಾಮಿಲಿ!: ನಿಮ್ಗೆ ಯಾರು ಇನ್ಸ್ಪಿರೇಷನ್?: Sangeetha.com MD ಸುಭಾಷ್ ಚಂದ್ರ Kannada Podcast

Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರಿಗೆ ಯಾರು ಇನ್‌ಸ್ಪೈರ್ ಅನ್ನೋ ಬಗ್ಗೆ ಹೇಳಿದ್ದಾರೆ.

ಸುಭಾಷ್ ಚಂದ್ರ ಅವರು ಈ ಬಗ್ಗೆ ಮಾತನಾಡಿದ್ದು, ನಾನು 10ನೇ ತರಗತಿ ಬಳಿಕ ಕಾಲೇಜಿಗೆ ಹೋಗಲೇ ಇಲ್ಲ. ಹಾಗಾಗಿ ಜೀವನವೇ ನನಗೆಲ್ಲ ಕಲಿಸಿಕೊಟ್ಟಿದೆ. ಸುಭಾಷ್ ಚಂದ್ರ ಅವರು ತಮ್ಮ ತಂದೆ ಬಗ್ಗೆ ಮಾತನಾಡಿದ್ದು, ನಮ್ಮ ತಂದೆ ಬ್ಯುಸಿನೆಸ್‌ಗೆ ಫಿಟ್ ಆಗಿರಲಿಲ್ಲ. ಅವರು ಒಳ್ಳೆಯವರು. ಆದರೆ ಅವರು ಸುಳ್ಳು ಹೇಳುವುದಿಲ್ಲ. ಹಾಗಂತ ಸುಳ್ಳು ಹೇಳಬೇಕು ಅಂತಲ್ಲ. ಬದಲಾಗಿ ನಿಜ ಹೇಳದೇಯೂ ಇರಬಹುದು.

ಅಲ್ಲದೇ, ತುಂಬಾ ಸಿಟ್ಟು. ಇದ್ದದ್ದನ್ನು ಇದ್ದ ಹಾಗೆ ಹೇಳಿ ಬಿಡುವವರು. ಅಲ್ಲದೇ, 29ನೇ ವಯಸ್ಸಿನಲ್ಲೇ ಅಮ್ಮ ತೀರಿಹೋದರು. ಆದರೆ ಅಪ್ಪ ಮರುಮದುವೆಯಾಗಲೇ ಇಲ್ಲಾ. ಅಂದಿನಿಂದ ಸಿಂಗಲ್ ಆಗಿಯೇ ಇದ್ದಾರೆ ಎಂದು ತಮ್ಮ ತಂದೆ ಬಗ್ಗೆ ಸುಭಾಷ್ ಚಂದ್ರ ಮಾತನಾಡಿದ್ದಾರೆ.

ಅಲ್ಲದೇ, ಸ್ವಂತ ಮನೆ ಇಲ್ಲದೇ, ಸುಭಾಷ್ ಮತ್ತು ಅವರ ತಂದೆ ಸಂಗೀತಾ ಆಫೀಸಿನಲ್ಲೇ ಜೀವನ ನಡೆಸಿದ್ದರಂತೆ. ಅಲ್ಲೇ ಕೆಲಸ, ಅಲ್ಲೇ ಊಟ, ಅಲ್ಲೇ ನಿದ್ದೆ. ಸತತ 4 ವರ್ಷಗಳ ಕಾಲ ಈ ರೀತಿಯಾಗಿಯೇ ಇದ್ದರಂತೆ ಸುಭಾಷ್ ಚಂದ್ರ ಮತ್ತು ಅವರ ತಂದೆ. ಸುಭಾಷ್ ಅವರು, ಅದೇ ಸ್ಟೋರ್‌ನಿಂದಲೇ ಶಾಲೆಗೆ ಹೋಗುತ್ತಿದ್ದರಂತೆ. ಈ ರೀತಿ ಕಷ್ಟ ಪಟ್ಟಿದ್ದ ಸುಭಾಷ್ ಅವರು ಇಂದು 800ಕ್ಕೂ ಹೆಚ್ಚು ಕಂಪನಿಗಳನ್ನು ನಡೆಸುತ್ತಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author