Bollywood: ಇತ್ತೀಚಿನ ದಿನಗಳಲ್ಲಿ ಉತ್ತರಭಾರತದ ಪಾಪರಾಜಿಗಳು ಸೆಲೆಬ್ರಿಟಿಗಳನ್ನು ಮಾತನಾಡಿಸುವ ರೀತಿ ನೀತಿ ಅತೀಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರೇ ಬೈಯ್ಯುತ್ತಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಪಾಪರಾಜಿಗಳು ಬೇಕಾದ ರೀತಿಯಲ್ಲಿ ಮಾತನಾಡುತ್ತಾರೆ. ಎಥಿಕ್ಸ್ ಮರೆತು ನಡುವಳಿಕೆ ತೋರಿಸುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೆಲ ದಿನಗಳ ಹಿಂದೆ ನಟಿ ಜಾನ್ವಿ ಕಪೂರ್, ಪಾಪರಾಜಿಗಳು ಪ್ರೈವೇಟ್ ಪಾರ್ಟ್ನ್ನು ಜೂಮ್ ಮಾಡಿ ವೀಡಿಯೋ ಮಾಡುತ್ತಿದ್ದಾರೆ. ಹಣಕ್ಕಾಗಿ ಇಷ್ಟು ಕೀಳು ಮಟ್ಟಕ್ಕೆ ಇಳಿಯಬೇಕಾ ಎಂದು ಪ್ರಶ್ನಿಸಿದ್ದರು.
ಇದೀಗ ನಟಿ ಶ್ರುತಿ ಹಾಸನ್ ಕೂಡ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರುತಿ ಮುಂಬೈನ ಹೋಟೇಲ್ನಿಂದ ಆಚೆ ಬರುತ್ತಿದ್ದಂತೆ, ಪಾಪರಾಜಿಗಳು ಅವರ ಫೋಟೋ ತೆಗೆಯಲು, ವೀಡಿಯೋ ಮಾಡಲು ಮುಂದೆ ಬಂದರು. ಆಗ ಶ್ರುತಿ ಮಗು ಮುಖದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಆದರೆ ಅದರಲ್ಲಿ ಏರ್ವ ಪಾಪರಾಜಿ, ಮಮ್ಮಾ, ಮಮ್ಮಾ ಎಂದು ಶ್ರುತಿ ಹಾಸನ್ರನ್ನು ಟೀಕಿಸಿದ್ದಾನೆ.
ಪಾಪರಾಜಿಯ ಈ ನಡುವಳಿಕೆಗೆ ಸಿಟ್ಟಾದ ಶ್ರುತಿ, ಯಾರು ನಿನ್ನ ಮಮ್ಮಾ..? ನಿನ್ನ ಮಮ್ಮಾ ನಾನಾ..? ಏನ್ ಬೊಗಳ್ತಿದಿಯಾ ನೀನು..? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೀಡಿಯೋಗೆ ಜನ ಬೇರೆ ಬೇರೆ ರೀತಿಯಾಗಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಪಾಪರಾಜಿಗಳದ್ದು ಅತೀಯಾಯ್ತು ಅಂತಾ ಹೇಳಿದ್ರೆ, ಇನ್ನು ಕೆಲವರು ಮಮ್ಮಾ ಅಂದಿದ್ರಲ್ಲಿ ಏನು ತಪ್ಪಿದೆ.? ಅದಕ್ಯಾಕೆ ಇಷ್ಟು ರಿಯಾಕ್ಟ್ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.




