Saturday, July 27, 2024

Latest Posts

ಸಂಕ್ರಾಂತಿ ಸ್ಪೆಶಲ್ ಮಾದಲಿ ರೆಸಿಪಿ..

- Advertisement -

ಸಂಕ್ರಾಂತಿ ಹಬ್ಬದ ಸ್ಪೆಶಲ್ ಆಗಿ ಪೊಂಗಲ್, ಶೇಂಗಾ ಹೋಳಿಗೆ, ಎಳ್ಳು ಬೆಲ್ಲ ರೆಸಿಪಿ ಮಾಡೋದು ಹೇಗೆ ಅಂತಾ ನಾವು ಈಗಾಗಲೇ ಹೇಳಿದ್ದೇವೆ. ಇದರೊಂದಿಗೆ ನಾವು ಇವತ್ತು ಮಾದಲಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಮಾದಲಿ ತಯಾರಿಸೋಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.

ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು ಸೇವಿಸಬಾರದು..

ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಅರ್ಧ ಕಪ್ ರವೆ, 1 ಕಪ್ ಬೆಲ್ಲ, ಕಾಲು ಕಪ್ ಹುರಿಗಡಲೆ, ಅರ್ಧ ಕಪ್ ಒಣಕೊಬ್ಬರಿ ತುರಿ, 2 ಚಮಚ ಸೋಂಪು, ನಾಲ್ಕು ಏಲಕ್ಕಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಒಂದು ದೊಡ್ಡ ಬೌಲ್‌ಗೆ ಗೋಧಿ ಹಿಟ್ಟು, ರವಾ, ಉಪ್ಪು ಹಾಕಿ ಚೆನ್‌ನಾಗಿ ಮಿಕ್ಸ್ ಮಾಡಿ. ಅಗತ್ಯವಿದ್ದಷ್ಟು ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿ. 15 ನಿಮಿಷದ ನಂತರ, ಆ ಹಿಟ್ಟಿನಿಂದ ಚಪಾತಿಯನ್ನ ತಯಾರಿಸಿ. ಚಪಾತಿ ಹುರಿದ ಮೇಲೆ ಆ ಚಪಾತಿಯನ್ನ ತುಂಡು ಮಾಡಿಕೊಂಡು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.

ಹೃದಯದ ಆರೋಗ್ಯವನ್ನ ಸರಿಯಾಗಿ ಇಟ್ಟುಕೊಳ್ಳಲು ಟಿಪ್ಸ್..

ಈಗ ಚಪಾತಿ ಪುಡಿಗೆ, ಬೆಲ್ಲ, ಕಾಯಿತುರಿ, ಹುಗಡಲೆ, ಏಲಕ್ಕಿ ಪುಡಿ, ಸೋಂಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಮಾದಲಿ ರೆಡಿ. ನೀವು ಇದನ್ನ ತಿನ್ನುವಾಗ ಇದಕ್ಕೆ ತುಪ್ಪ ಹಾಕಿಕೊಂಡು ತಿಂದರೆ ಇನ್ನೂ ರುಚಿಯಾಗಿರತ್ತೆ.

- Advertisement -

Latest Posts

Don't Miss